ಸೋಮಾರಿಯು--ಹೊರಗೆ ಸಿಂಹವಿದೆ; ಅದು ನನ್ನನ್ನು ಬೀದಿಗಳಲ್ಲಿ ಕೊಂದು ಹಾಕುತ್ತದೆ ಎಂದು ಹೇಳುತ್ತಾನೆ.
11ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.
12ಕರ್ತನ ಕಣ್ಣುಗಳು ತಿಳುವಳಿಕೆಯನ್ನು ಕಾಪಾಡುತ್ತವೆ; ಆತನು ದೋಷಿಯ ಮಾತುಗಳನ್ನು ಕೆಡವಿಹಾಕುತ್ತಾನೆ.
13ಸೋಮಾರಿಯು--ಹೊರಗೆ ಸಿಂಹವಿದೆ; ಅದು ನನ್ನನ್ನು ಬೀದಿಗಳಲ್ಲಿ ಕೊಂದು ಹಾಕುತ್ತದೆ ಎಂದು ಹೇಳುತ್ತಾನೆ.
14ಪರಸ್ತ್ರೀಯ ಬಾಯಿ ಆಳವಾದ ಕುಣಿ; ಕರ್ತನಿಗೆ ಅಸಹ್ಯವಾದವನು ಅದರಲ್ಲಿ ಬೀಳುವನು.
15ಮೂರ್ಖತನವು ಹುಡುಗನ ಹೃದಯದಲ್ಲಿ ಕಟ್ಟಲ್ಪಟ್ಟಿದೆ. ಶಿಕ್ಷೆಯ ಬೆತ್ತವು ಅದನ್ನು ಅವನಿಂದ ದೂರವಾಗಿ ಓಡಿಸಿಬಿಡುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ