೧ ಅರಸುಗಳು 18:27

ಮಧ್ಯಾಹ್ನದಲ್ಲಿ ಎಲೀಯನು ಅವ ರನ್ನು ಗೇಲಿಮಾಡಿ ಅವರಿಗೆ--ದೊಡ್ಡ ಶಬ್ದದಿಂದ ಕೂಗಿರಿ, ಯಾಕಂದರೆ ಅವನು ಒಬ್ಬ ದೇವರು; ಇಲ್ಲವೆ ಮಾತನಾಡುತ್ತಿದ್ದಾನು; ಇಲ್ಲವೆ ಹಿಂದಟ್ಟುತ್ತಿದ್ದಾನು.; ಇಲ್ಲವೆ ಪ್ರಯಾಣದಲ್ಲಿದ್ದಾನು; ಇಲ್ಲವೆ ಅವನು ನಿದ್ರೆ ಮಾಡುತ್ತಿದ್ದಾನು; ಈಗ ಅವನು ಎಚ್ಚರಿಸಲ್ಪಡಬೇಕು ಅಂದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 18

25ಅದಕ್ಕೆ ಜನರೆಲ್ಲರು ಪ್ರತ್ಯುತ್ತರ ವಾಗಿ--ಈ ಮಾತು ಒಳ್ಳೇದು ಅಂದರು. ಆಗ ಎಲೀ ಯನು ಬಾಳನ ಪ್ರವಾದಿಗಳಿಗೆ--ನೀವು ಅನೇಕರಾಗಿ ರುವದರಿಂದ ಒಂದು ಹೋರಿಯನ್ನು ಆದುಕೊಂಡು ಅದನ್ನು ಮೊದಲು ಸಿದ್ಧಮಾಡಿ ನಿಮ್ಮ ದೇವರುಗಳ ಹೆಸರನ್ನು ಕರೆಯಿರಿ; ಆದರೆ ಬೆಂಕಿಯನ್ನು ಹಾಕದೆ ಇರ್ರಿ ಅಂದನು.

26ಅವರು ತಮಗೆ ಕೊಡಲ್ಪಟ್ಟ ಹೋರಿ ಯನ್ನು ತೆಗೆದುಕೊಂಡು ಸಿದ್ಧಮಾಡಿ--ಓ ಬಾಳನೇ, ನಮ್ಮನ್ನು ಕೇಳೆಂದು ಉದಯದಿಂದ ಮಧ್ಯಾಹ್ನದ ವರೆಗೂ ಬಾಳನ ಹೆಸರನ್ನು ಕರೆಯುತ್ತಿದ್ದರು. ಆದರೆ ಒಂದು ಶಬ್ದವಾಗಲಿ ಪ್ರತ್ಯುತ್ತರ ಕೊಡುವವನಾಗಲಿ ಇರಲಿಲ್ಲ. ಅವರು ಮಾಡಿದ ಬಲಿಪೀಠದ ಹತ್ತಿರ ಕುಣಿದಾಡಿದರು.

27ಮಧ್ಯಾಹ್ನದಲ್ಲಿ ಎಲೀಯನು ಅವ ರನ್ನು ಗೇಲಿಮಾಡಿ ಅವರಿಗೆ--ದೊಡ್ಡ ಶಬ್ದದಿಂದ ಕೂಗಿರಿ, ಯಾಕಂದರೆ ಅವನು ಒಬ್ಬ ದೇವರು; ಇಲ್ಲವೆ ಮಾತನಾಡುತ್ತಿದ್ದಾನು; ಇಲ್ಲವೆ ಹಿಂದಟ್ಟುತ್ತಿದ್ದಾನು.; ಇಲ್ಲವೆ ಪ್ರಯಾಣದಲ್ಲಿದ್ದಾನು; ಇಲ್ಲವೆ ಅವನು ನಿದ್ರೆ ಮಾಡುತ್ತಿದ್ದಾನು; ಈಗ ಅವನು ಎಚ್ಚರಿಸಲ್ಪಡಬೇಕು ಅಂದನು.

28ಅವರು ದೊಡ್ಡ ಶಬ್ದದಿಂದ ಕೂಗಿ ತಮ್ಮ ಕ್ರಮದ ಪ್ರಕಾರವೇ ರಕ್ತವು ತಮ್ಮ ಮೇಲೆ ಸೋರುವ ಮಟ್ಟಿಗೂ ಕತ್ತಿಗಳಿಂದಲೂ ಚೂರಿಗಳಿಂದಲೂ ತಮ್ಮನ್ನು ಕೊಯ್ದುಕೊಂಡರು.

29ಮಧ್ಯಾಹ್ನವಾದ ತರುವಾಯ ಸಾಯಂಕಾಲದ ಬಲಿ ಅರ್ಪಿಸಲ್ಪಡುವ ವೇಳೆಯ ವರೆಗೂ ಪ್ರವಾದಿಸುತ್ತಾ ಇದ್ದರು. ಆದರೆ ಶಬ್ದವಾ ದರೂ ಪ್ರತ್ಯುತ್ತರಕೊಡುವವನಾದರೂ ಲಕ್ಷಿಸುವವ ನಾದರೂ ಇರಲಿಲ್ಲ.

೧ ಅರಸುಗಳು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी