ನೀನು ಕಂಡ ಎಲ್ಲಾ ಸ್ಥಳಗಳಲ್ಲಿ ನಿನ್ನ ದಹನ ಬಲಿಗಳನ್ನು ಅರ್ಪಿಸದ ಹಾಗೆ ನೋಡಿಕೋ;
11ನೀವು ಸುರಕ್ಷಿತವಾಗಿ ವಾಸಿಸುವಾಗ ನಿಮ್ಮ ದೇವರಾದ ಕರ್ತನು ತನ್ನ ಹೆಸರಿನ ನಿವಾಸಕ್ಕೆ ಆದುಕೊಳ್ಳುವ ಸ್ಥಳವಿರುವದು; ಅಲ್ಲಿಗೆ ನಾನು ನಿಮಗೆ ಆಜ್ಞಾಪಿಸುವದನ್ನೆಲ್ಲಾ ಅಂದರೆ ನಿಮ್ಮ ದಹನ ಬಲಿಗಳನ್ನೂ ಬಲಿಗಳನ್ನೂ ನಿಮ್ಮ ದಶಮಾಂಶಗಳನ್ನೂ ನಿಮ್ಮ ಕೈ ಎತ್ತುವ ಅರ್ಪಣೆಗಳನ್ನೂ ನೀವು ಕರ್ತನಿಗೆ ಮಾಡುವ ಎಲ್ಲಾ ಶ್ರೇಷ್ಠ ಪ್ರಮಾಣಗಳನ್ನೂ ತರಬೇಕು.
12ಅಲ್ಲಿ ನೀವು ನಿಮ್ಮ ದೇವರಾದ ಕರ್ತನ ಮುಂದೆ ಸಂತೋಷವಾಗಿರಬೇಕು; ನೀವೂ ನಿಮ್ಮ ಕುಮಾರ ಕುಮಾರ್ತೆಯರೂ ನಿಮ್ಮ ದಾಸದಾಸಿಯರೂ; ನಿಮ್ಮ ಬಾಗಲುಗಳಲ್ಲಿರುವ ಲೇವಿಯನು ಸಹ. ಅವನಿಗೆ ನಿಮ್ಮ ಸಂಗಡ ಪಾಲೂ ಸ್ವಾಸ್ತ್ಯವೂ ಇಲ್ಲ.
13ನೀನು ಕಂಡ ಎಲ್ಲಾ ಸ್ಥಳಗಳಲ್ಲಿ ನಿನ್ನ ದಹನ ಬಲಿಗಳನ್ನು ಅರ್ಪಿಸದ ಹಾಗೆ ನೋಡಿಕೋ;
14ಕರ್ತನು ನಿನ್ನ ಗೋತ್ರಗಳಲ್ಲಿ ಒಂದನ್ನು ಆದು ಕೊಳ್ಳುವ ಸ್ಥಳದಲ್ಲೇ ನಿನ್ನ ದಹನಬಲಿಗಳನ್ನು ಅರ್ಪಿಸಬೇಕು; ಅಲ್ಲೇ ನಾನು ನಿನಗೆ ಆಜ್ಞಾಪಿಸು ವದನ್ನೆಲ್ಲಾ ಮಾಡಬೇಕು.
15ಆದರೂ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಆಶೀರ್ವಾದದ ಪ್ರಕಾರ ನಿನಗೆ ಮನಸ್ಸಿದ್ದಷ್ಟು ಮಾಂಸವನ್ನು ನಿನ್ನ ಎಲ್ಲಾ ಬಾಗಲುಗಳಲ್ಲಿ ಕೊಯ್ದು ತಿನ್ನಬಹುದು; ಜಿಂಕೆ ಕಡವೆ ಗಳ ಹಾಗೆಯೇ ಶುದ್ಧನೂ ಅಶುದ್ಧನೂ ಅದನ್ನು ತಿನ್ನ ಬಹುದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ