ಯಾಜಕಕಾಂಡ 11:41

ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಅಶುದ್ಧವಾಗಿದೆ; ಅದನ್ನು ತಿನ್ನಬಾರದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 11

39ನೀವು ತಿನ್ನುವ ಯಾವದಾದರೂ ಪಶುವು ಸತ್ತಿದ್ದರೆ ಅದರ ಶವವನ್ನು ಮುಟ್ಟಿದವನು ಸಂಜೆಯ ವರೆಗೆ ಅಶುದ್ಧನಾಗಿರುವನು.

40ಅದರ ಶವವನ್ನು ತಿನ್ನುವವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಸಂಜೆಯ ವರೆಗೆ ಅಶುದ್ಧನಾಗಿರುವನು: ಅದರ ಶವವನ್ನು ಹೊರುವವನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಅವನು ಸಂಜೆಯ ವರೆಗೆ ಅಶುದ್ಧನಾಗಿರುವನು.

41ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಅಶುದ್ಧವಾಗಿದೆ; ಅದನ್ನು ತಿನ್ನಬಾರದು.

42ಹೊಟ್ಟೆಯಿಂದ ಹರಿದಾಡುವ ಯಾವದನ್ನೂ ನಾಲ್ಕು ಕಾಲಿನ ಮೇಲೆ ನಡೆದಾಡುವ ಯಾವದನ್ನೂ ಇಲ್ಲವೆ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳಲ್ಲಿ ಬಹಳ ಕಾಲುಗಳಿದ್ದ ಯಾವದನ್ನಾದರೂ ನೀವು ತಿನ್ನ ಬಾರದು; ಅವು ಅಶುದ್ಧವಾಗಿವೆ.

43ಯಾವದೇ ಹರಿದಾಡುವ ಪ್ರಾಣಿಯೊಡನೆಯೂ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬಾರದು ಇಲ್ಲವೆ ನೀವು ಅವುಗಳೊಂದಿಗೆ ನಿಮ್ಮನ್ನು ಅಶುದ್ಧಪಡಿಸಿಕೊಂಡು ಮಲಿನರಾಗಬಾರದು.

ಯಾಜಕಕಾಂಡ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी