೧ ಅರಸುಗಳು 9:23

ಇವರೊಳಗೆ ಐದುನೂರ ಐವತ್ತು ಮಂದಿ ಸೊಲೊಮೋನನ ಕೆಲಸದ ಪ್ರಧಾನರಾದ ಅಧಿಕಾರಿಗಳಾಗಿದ್ದರು. ಇವರು ಕೆಲಸದಲ್ಲಿ ಕಷ್ಟಪಡುವ ಜನರ ಮೇಲೆ ಅಧಿಕಾರಿಗಳಾಗಿದ್ದರು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 9

21ಇವರ ತರುವಾಯ ದೇಶದಲ್ಲಿ ಉಳಿದ ಇಸ್ರಾಯೇಲ್‌ ಮಕ್ಕಳು ನಿರ್ಮೂಲ ಮಾಡದ ಅವರ ಮಕ್ಕಳು; ಇವರ ಮೇಲೆ ಸೊಲೊಮೋನನು ಇಂದಿನ ವರೆಗೂ ದಾಸತ್ವದ ಬಿಟ್ಟೀ ನೇಮಕವನ್ನಿಟ್ಟನು.

22ಆದರೆ ಇಸ್ರಾಯೇಲಿನ ಮಕ್ಕಳನ್ನು ಸೊಲೊಮೋನನು ದಾಸರಾಗ ಮಾಡಲಿಲ್ಲ; ಅವರು ಯುದ್ಧಸ್ಥರಾಗಿಯೂ ತನ್ನ ಸೇವಕರಾಗಿಯೂ ಕೈಕೆಳಗಿ ರುವ ಪ್ರಧಾನರಾಗಿಯೂ ಅಧಿಕಾರಿಗಳಾಗಿಯೂ ರಥ ಗಳನ್ನು ನಡಿಸುವವರಾಗಿಯೂ ತನ್ನ ರಾಹುತರಾ ಗಿಯೂ ಇದ್ದರು.

23ಇವರೊಳಗೆ ಐದುನೂರ ಐವತ್ತು ಮಂದಿ ಸೊಲೊಮೋನನ ಕೆಲಸದ ಪ್ರಧಾನರಾದ ಅಧಿಕಾರಿಗಳಾಗಿದ್ದರು. ಇವರು ಕೆಲಸದಲ್ಲಿ ಕಷ್ಟಪಡುವ ಜನರ ಮೇಲೆ ಅಧಿಕಾರಿಗಳಾಗಿದ್ದರು.

24ಆದರೆ ಫರೋಹನ ಮಗಳು ದಾವೀದನ ಪಟ್ಟಣ ದಿಂದ ತನಗೋಸ್ಕರ ಸೊಲೊಮೋನನು ಕಟ್ಟಿಸಿದ ಪಟ್ಟಣಕ್ಕೆ ಬಂದಳು. ಆಗ ಅವನು ಮಿಲ್ಲೋವನ್ನು ಕಟ್ಟಿಸಿದನು.

25ವರುಷಕ್ಕೆ ಮೂರು ಸಾರಿ ಸೊಲೊ ಮೋನನು ಕರ್ತನಿಗೆ ತಾನು ಕಟ್ಟಿಸಿದ ಬಲಿಪೀಠದ ಮೇಲೆ ದಹನಬಲಿಗಳನ್ನೂ ಸಮಾಧಾನದ ಬಲಿಗ ಳನ್ನೂ ಅರ್ಪಿಸಿ ಕರ್ತನ ಮುಂದಿರುವ ಪೀಠದ ಮೇಲೆ ಧೂಪವನ್ನು ಸುಟ್ಟನು. ಹೀಗೆಯೇ ಅವನು ಮಂದಿ ರವನ್ನು ಕಟ್ಟಿಸಿ ತೀರಿಸಿದನು.

೧ ಅರಸುಗಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी