ನಿನ್ನ ಗೋಡೆಗಳು ತಿರುಗಿ ಕಟ್ಟಲ್ಪಡುವ ಆ ದಿನದಲ್ಲಿ ನಿರ್ಣಯವು ದೂರವಾಗಿ ಹೋಗುವದು.
9ನಾನು ಕರ್ತನಿಗೆ ವಿರೋಧ ವಾಗಿ ಪಾಪ ಮಾಡಿದ್ದರಿಂದ ಆತನು ತನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡಿಸುವ ತನಕ ಆತನ ಕೋಪವನ್ನು ತಾಳುವೆನು; ಆತನು ನನ್ನನ್ನು ಬೆಳಕಿಗೆ ತರುವನು, ಆತನ ನೀತಿಯನ್ನು ನೋಡುವೆನು.
10ನನ್ನ ಶತ್ರುಗಳು ಸಹ ಅದನ್ನು ನೋಡುವರು; ನಿನ್ನ ದೇವರಾದ ಕರ್ತನು ಎಲ್ಲಿ ಎಂದು ನನಗೆ ಹೇಳಿದವಳನ್ನು ನಾಚಿಕೆಯು ಮುಚ್ಚುವದು; ನನ್ನ ಕಣ್ಣುಗಳು ಅವಳನ್ನು ನೋಡುವವು, ಈಗಲೇ ಬೀದಿಗಳಲ್ಲಿರುವ ಕೆಸರಿನಂತೆ ತುಳಿಯಲ್ಪಡು ವಳು.
11ನಿನ್ನ ಗೋಡೆಗಳು ತಿರುಗಿ ಕಟ್ಟಲ್ಪಡುವ ಆ ದಿನದಲ್ಲಿ ನಿರ್ಣಯವು ದೂರವಾಗಿ ಹೋಗುವದು.
12ಆ ದಿನದಲ್ಲಿ ಅಶ್ಶೂರಿನಿಂದಲೂ ಕೋಟೆಯುಳ್ಳ ಪಟ್ಟಣಗಳಿಂದಲೂ ಕೋಟೆಯಿಂದ ನದಿಯವರೆಗೂ ಸಮುದ್ರದಿಂದ ಸಮುದ್ರದ ವರೆಗೂ ಬೆಟ್ಟದಿಂದ ಬೆಟ್ಟದ ವರೆಗೂ ನಿನ್ನ ಬಳಿಗೆ ಬರುವರು.
13ಆದರೂ ದೇಶವು ಅದರ ನಿವಾಸಿಗಳ ನಿಮಿತ್ತ ಅವರ ದುಷ್ಕ್ರಿಯೆಗಳ ಫಲದಿಂದ ಹಾಳಾಗುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ