ಯೆರೆಮಿಯ 44:13

ನಾನು ಯೆರೂಸಲೇಮನ್ನು ಶಿಕ್ಷಿಸಿದ ಹಾಗೆ ಐಗುಪ್ತದೇಶದಲ್ಲಿ ವಾಸಮಾಡು ವವರನ್ನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಶಿಕ್ಷಿಸುವೆನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 44

11ಆದದ ರಿಂದ ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯೆಹೂದವನ್ನೆಲ್ಲಾ ಕಡಿದು ಬಿಡುವದಕ್ಕೆ ನನ್ನ ದೃಷ್ಟಿ ಯನ್ನು ಕೇಡಿಗಾಗಿ ನಿಮಗೆ ವಿರೋಧವಾಗಿ ಇಡುತ್ತೇನೆ.

12ಐಗುಪ್ತದೇಶಕ್ಕೆ ಹೋಗಿ ಅಲ್ಲಿ ತಂಗಬೇಕೆಂದು ತಮ್ಮ ಮುಖಗಳನ್ನು ತಿರುಗಿಸಿರುವ ಯೆಹೂದದಲ್ಲಿ ಉಳಿದಿರುವವರನ್ನು ತಕ್ಕೊಳ್ಳುತ್ತೇನೆ; ಅವರೆಲ್ಲರೂ ಕಡಿದು ಬಿಡಲ್ಪಟ್ಟ ಐಗುಪ್ತದೇಶದಲ್ಲಿ ಬೀಳುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಕಡಿದು ಬಿಡಲ್ಪಡು ವರು; ಚಿಕ್ಕವನು ಮೊದಲುಗೊಂಡು ದೊಡ್ಡವನ ವರೆಗೂ ಕತ್ತಿಯಿಂದಲೂ ಕ್ಷಾಮದಿಂದಲೂ ಸಾಯು ವರು. ಅವರು ಅಸಹ್ಯವೂ ವಿಸ್ಮಯವೂ ಶಾಪವೂ ನಿಂದೆಯೂ ಆಗುವರು.

13ನಾನು ಯೆರೂಸಲೇಮನ್ನು ಶಿಕ್ಷಿಸಿದ ಹಾಗೆ ಐಗುಪ್ತದೇಶದಲ್ಲಿ ವಾಸಮಾಡು ವವರನ್ನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯ ದಿಂದಲೂ ಶಿಕ್ಷಿಸುವೆನು.

14ಐಗುಪ್ತ ದೇಶದಲ್ಲಿ ವಾಸಿಸುವದಕ್ಕೆ ಹೋಗಿರುವ ಯೆಹೂದದ ಉಳಿದಿರು ವವರು ತಾವು ತಿರುಗಿಕೊಂಡು ಯೆಹೂದದಲ್ಲಿ ವಾಸಮಾಡಬೇಕೆಂದು ಮನಸ್ಸು ಮಾಡಿರುವವರಲ್ಲಿ ಒಬ್ಬನಾದರೂ ಯೆಹೂದ ದೇಶಕ್ಕೆ ತಿರುಗಿಕೊಳ್ಳು ವದಕ್ಕೆ ತಪ್ಪಿಸಿಕೊಳ್ಳುವದಿಲ್ಲ, ನಿಲ್ಲುವದಿಲ್ಲ; ಓಡಿಹೋಗುವ ವರು ಅಲ್ಲದೆ ಇನ್ಯಾರೂ ಅಲ್ಲಿಗೆ ತಿರುಗಿ ಕೊಳ್ಳುವದಿಲ್ಲ.

15ಆಗ ತಮ್ಮ ಹೆಂಡತಿಯರು ಬೇರೆ ದೇವರುಗಳಿಗೆ ಧೂಪಸುಟ್ಟರೆಂದು ತಿಳಿದ ಗಂಡಸರೆಲ್ಲರೂ ದೊಡ್ಡ ಗುಂಪಾಗಿ ಹತ್ತಿರ ನಿಂತಿದ್ದ ಹೆಂಗಸರೆಲ್ಲರೂ ಐಗುಪ್ತ ದೇಶದಲ್ಲಿ ಪತ್ರೋಸ್‌ನಲ್ಲಿ ವಾಸಮಾಡಿದ ಜನ ರೆಲ್ಲರೂ ಯೆರೆವಿಾಯನಿಗೆ ಉತ್ತರಕೊಟ್ಟು ಹೇಳಿದ್ದೇನಂ ದರೆ--

ಯೆರೆಮಿಯ 44 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी