೧ ಅರಸುಗಳು 3:8

ಇದಲ್ಲದೆ ನಿನ್ನ ಸೇವಕನು ನೀನು ಆದುಕೊಂಡ ನಿನ್ನ ಮಹಾಜನರ ಮಧ್ಯದಲ್ಲಿ ಇದ್ದಾನೆ. ಆ ಜನರು ಬಹಳವಾಗಿರುವ ದರಿಂದ ಅವರನ್ನು ಎಣಿಸಲೂ ಲೆಕ್ಕ ಬರೆಯಲೂ ಆಗದು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 3

6ಅದಕ್ಕೆ ಸೊಲೊಮೋನನು--ನನ್ನ ತಂದೆಯಾಗಿರುವ ನಿನ್ನ ಸೇವಕನಾದ ದಾವೀದನು ನಿನ್ನ ಮುಂದೆ ಸತ್ಯದಿಂದಲೂ ನೀತಿಯಿಂದಲೂ ಯಥಾರ್ಥವಾದ ಹೃದಯವುಳ್ಳವ ನಾಗಿಯೂ ನಡೆದದ್ದರಿಂದ ನೀನು ಅವನಿಗೆ ಬಹು ದಯೆತೋರಿಸಿ ಈ ಮಹಾಕರುಣೆಯನ್ನು ಅವನಿ ಗೋಸ್ಕರ ಕಾದಿಟ್ಟಿದ್ದೀ. ಈ ಹೊತ್ತಿರುವ ಹಾಗೆಯೇ ತನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಒಬ್ಬ ಮಗನನ್ನು ಕೊಟ್ಟಿದ್ದೀ.

7ನನ್ನ ದೇವರಾದ ಕರ್ತನೇ, ನೀನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ನಿನ್ನ ಸೇವಕನನ್ನು ಅರಸನಾಗಮಾಡಿದ್ದೀ. ಆದರೆ ನಾನು ಚಿಕ್ಕ ಬಾಲಕನಾಗಿದ್ದು ಹೊರಗೆ ಹೋಗುವದಕ್ಕೂ ಒಳಗೆ ಬರುವದಕ್ಕೂ ಅರಿಯದೆ ಇದ್ದೇನೆ.

8ಇದಲ್ಲದೆ ನಿನ್ನ ಸೇವಕನು ನೀನು ಆದುಕೊಂಡ ನಿನ್ನ ಮಹಾಜನರ ಮಧ್ಯದಲ್ಲಿ ಇದ್ದಾನೆ. ಆ ಜನರು ಬಹಳವಾಗಿರುವ ದರಿಂದ ಅವರನ್ನು ಎಣಿಸಲೂ ಲೆಕ್ಕ ಬರೆಯಲೂ ಆಗದು.

9ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು.

10ಸೊಲೊಮೋನನು ಕೇಳಿದ ಈ ಮಾತು ಕರ್ತನ ದೃಷ್ಟಿಗೆ ಒಳ್ಳೇದಾಗಿತ್ತು.

೧ ಅರಸುಗಳು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी