ಯೆಹೆಜ್ಕೇಲನು 23:36

ಇದಲ್ಲದೆ ಕರ್ತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಒಹೊಲಳಿಗೂ ಒಹೊಲೀ ಬಳಿಗೂ ನ್ಯಾಯತೀರಿಸುವಿಯೋ? ಹೌದು, ಅವರ ಅಸಹ್ಯಗಳನ್ನು ಅವರಿಗೆ ತಿಳಿಸು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 23

34ನೀನು ಅದರಲ್ಲಿ ಸ್ವಲ್ಪವೂ ಉಳಿಯದಂತೆ ಹೀರಿ ಕುಡಿದು ಅದನ್ನು ಬೋಕಿಗಳ ಹಾಗೆ ಒಡೆದುಹಾಕುವಿ ಮತ್ತು ನೀನೇ ನಿನ್ನ ಸ್ತನಗಳನ್ನು ಕಿತ್ತುಕೊಳ್ಳುವಿ; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳಿದ್ದಾನೆ.

35ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನನ್ನು ಮರೆತುಬಿಟ್ಟು ನನ್ನನ್ನು ನಿನ್ನ ಬೆನ್ನ ಹಿಂದಕ್ಕೆ ಎಸೆದು ಮರೆತದ್ದರಿಂದ ನಿನ್ನ ದುಷ್ಕರ್ಮವನ್ನೂ ವ್ಯಭಿಚಾರವನ್ನೂ ಅನುಭವಿಸಲೇಬೇಕು.

36ಇದಲ್ಲದೆ ಕರ್ತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಒಹೊಲಳಿಗೂ ಒಹೊಲೀ ಬಳಿಗೂ ನ್ಯಾಯತೀರಿಸುವಿಯೋ? ಹೌದು, ಅವರ ಅಸಹ್ಯಗಳನ್ನು ಅವರಿಗೆ ತಿಳಿಸು.

37ಹೇಗಂದರೆ, ಅವರು ವ್ಯಭಿಚಾರ ಮಾಡಿದ್ದಾರೆ, ರಕ್ತವು ಅವರ ಕೈಗಳಲ್ಲಿ ಅದೆ; ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಕೊಟ್ಟಿದ್ದಾರೆ.

38ಇದಲ್ಲದೆ ಇದನ್ನು ಮಾಡಿದ ದಿನದಲ್ಲಿಯೇ ನನ್ನ ಪರಿಶುದ್ಧಸ್ಥಳವನ್ನು ಅಪವಿತ್ರಪಡಿಸಿ ನನ್ನ ಸಬ್ಬತ್ತುಗಳನ್ನು ಕೆಡಿಸಿದ್ದಾರೆ.

ಯೆಹೆಜ್ಕೇಲನು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी