ಅಬ್ರಾಮನು--ಇಗೋ, ನೀನು ನನಗೆ ಸಂತಾನವನ್ನು ಕೊಡಲಿಲ್ಲ; ಇಗೋ, ನನ್ನ ಮನೆಯಲ್ಲಿ ಹುಟ್ಟಿದವನು ನನಗೆ ಬಾಧ್ಯನಾಗಿ ರುವನು ಅಂದಾಗ
1ಇವುಗಳಾದ ಮೇಲೆ ಅಬ್ರಾಮನಿಗೆ ದರ್ಶನದಲ್ಲಿ ಕರ್ತನ ವಾಕ್ಯವು ಬಂದು--ಅಬ್ರಾಮನೇ, ಭಯಪಡಬೇಡ; ನಾನೇ ನಿನ್ನ ಗುರಾಣಿಯೂ ನಿನ್ನ ಅತ್ಯಧಿಕವಾದ ಬಹುಮಾನವೂ ಆಗಿದ್ದೇನೆ.
2ಅದಕ್ಕೆ ಅಬ್ರಾಮನು--ಕರ್ತನಾದ ದೇವರೇ, ನನಗೆ ಏನು ಕೊಟ್ಟರೇನು? ನಾನು ಮಕ್ಕಳಿಲ್ಲದವನಾಗಿದ್ದೇನೆ. ಈ ದಮಸ್ಕದವನಾದ ಎಲೀಯೆಜರನು ನನ್ನ ಮನೆಯ ಮನೆವಾರ್ತೆಯವನಾ ಗಿದ್ದಾನಲ್ಲಾ ಅಂದನು.
3ಅಬ್ರಾಮನು--ಇಗೋ, ನೀನು ನನಗೆ ಸಂತಾನವನ್ನು ಕೊಡಲಿಲ್ಲ; ಇಗೋ, ನನ್ನ ಮನೆಯಲ್ಲಿ ಹುಟ್ಟಿದವನು ನನಗೆ ಬಾಧ್ಯನಾಗಿ ರುವನು ಅಂದಾಗ
4ಇಗೋ, ಕರ್ತನ ವಾಕ್ಯವು ಅವನಿಗೆ ಉಂಟಾಗಿ--ಇವನು ನಿನಗೆ ಬಾಧ್ಯನಾಗುವ ದಿಲ್ಲ. ನಿನ್ನಿಂದ ಹುಟ್ಟಿದವನೇ ನಿನಗೆ ಬಾಧ್ಯನಾಗುವನು ಅಂದನು.
5ಕರ್ತನು ಅವನನ್ನು ಹೊರಗೆ ಕರಕೊಂಡು ಬಂದು--ಈಗ ನೀನು ಆಕಾಶವನ್ನು ದೃಷ್ಟಿಸಿ ನಕ್ಷತ್ರ ಗಳನ್ನು ಲೆಕ್ಕಿಸಶಕ್ತನಾದರೆ ಅವುಗಳನ್ನು ಲೆಕ್ಕಿಸು ಅಂದನು. ಆತನು ಅವನಿಗೆ--ಅದರಂತೆಯೇ ನಿನ್ನ ಸಂತತಿಯು ಆಗುವದು ಎಂದು ಅವನಿಗೆ ಹೇಳಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ