ಆದಿಕಾಂಡ 37:30

ಅವನು ತನ್ನ ಸಹೋದರರ ಬಳಿಗೆ ತಿರಿಗಿಹೋಗಿ--ಆ ಮಗುವು ಇಲ್ಲವಲ್ಲಾ; ಹಾಗಾದರೆ ನಾನು ಎಲ್ಲಿಗೆ ಹೋಗಲಿ ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 37

28ಈ ಪ್ರಕಾರ (ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ) ಅವರು ಯೋಸೇಫನನ್ನು ತಗ್ಗಿನಿಂದ ಮೇಲೆತ್ತಿ ಇಷ್ಮಾಯೇಲ್ಯ ರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು, ಅವರು ಯೋಸೇಫನನ್ನು ಐಗುಪ್ತಕ್ಕೆ ಕರಕೊಂಡು ಹೋದರು.

29ರೂಬೇನನು ತಗ್ಗಿನ ಬಳಿಗೆ ತಿರಿಗಿ ಬಂದಾಗ ಇಗೋ, ಯೋಸೇಫನು ತಗ್ಗಿನಲ್ಲಿ ಇಲ್ಲದ್ದರಿಂದ ತನ್ನ ವಸ್ತ್ರಗಳನ್ನು ಹರಿದು ಕೊಂಡನು.

30ಅವನು ತನ್ನ ಸಹೋದರರ ಬಳಿಗೆ ತಿರಿಗಿಹೋಗಿ--ಆ ಮಗುವು ಇಲ್ಲವಲ್ಲಾ; ಹಾಗಾದರೆ ನಾನು ಎಲ್ಲಿಗೆ ಹೋಗಲಿ ಅಂದನು.

31ಆಗ ಅವರು ಯೋಸೇಫನ ಅಂಗಿಯನ್ನು ತೆಗೆದುಕೊಂಡು ಮೇಕೆಯ ಮರಿಯನ್ನು ಕೊಯ್ದು ಆ ಅಂಗಿಯನ್ನು ರಕ್ತದಲ್ಲಿ ಅದ್ದಿ

32ಆ ಬಣ್ಣದ ಅಂಗಿಯನ್ನು ಕಳುಹಿಸಿಕೊಟ್ಟರು. ಅವರು ಅದನ್ನು ಅವರ ತಂದೆಯ ಬಳಿಗೆ ತಂದು--ಇದು ನಮಗೆ ಸಿಕ್ಕಿತು. ಇದು ನಿನ್ನ ಮಗನ ಅಂಗಿಯೋ ಏನೋ ನೋಡು ಎಂದು ಹೇಳಿದರು.

ಆದಿಕಾಂಡ 37 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी