ಯೆರೆಮಿಯ 49:31

ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ ಎಂದು ಕರ್ತನು ಅನ್ನುತ್ತಾನೆ; ಅದಕ್ಕೆ ಬಾಗಲುಗಳು ಇಲ್ಲ; ಅಗುಳಿಗಳು ಇಲ್ಲ; ಏಕಾಂತವಾಗಿ ವಾಸಮಾಡುತ್ತದೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 49

29ಅವರ ಗುಡಾರಗಳನ್ನೂ ಮಂದೆಗಳನ್ನೂ ತಕ್ಕೊಳ್ಳುವರು; ಅವರ ತೆರೆಗಳನ್ನೂ ಎಲ್ಲಾ ಪಾತ್ರೆ ಗಳನ್ನೂ ಒಂಟೆಗಳನ್ನೂ ವಶಮಾಡಿಕೊಳ್ಳುವರು; ಸುತ್ತಲೂ ಭಯವೆಂದು ಅವರಿಗೆ ಕೂಗುವರು.

30ಹಾಚೋರಿನ ನಿವಾಸಿಗಳೇ, ಓಡಿಹೋಗಿರಿ, ದೂರಕ್ಕೆ ಹೋಗಿಬಿಡಿರಿ, ಆಳವಾದ ಸ್ಥಳದಲ್ಲಿ ವಾಸ ವಾಗಿರ್ರಿ ಎಂದು ಕರ್ತನು ಅನ್ನುತ್ತಾನೆ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಿಮಗೆ ವಿರೋಧವಾಗಿ ಆಲೋಚನೆಯನ್ನೂ ಕಲ್ಪನೆಯನ್ನೂ ಮಾಡಿದ್ದಾನೆ.

31ಏಳಿರಿ, ಭದ್ರವಾಗಿ ವಾಸಿಸುವ ಸುಖವುಳ್ಳ ಜನಾಂಗದ ಬಳಿಗೆ ಹೋಗಿರಿ ಎಂದು ಕರ್ತನು ಅನ್ನುತ್ತಾನೆ; ಅದಕ್ಕೆ ಬಾಗಲುಗಳು ಇಲ್ಲ; ಅಗುಳಿಗಳು ಇಲ್ಲ; ಏಕಾಂತವಾಗಿ ವಾಸಮಾಡುತ್ತದೆ.

32ಅವರ ಒಂಟೆಗಳು ಕೊಳ್ಳೆಯಾಗುವವು, ದನಗಳ ಸಮೂಹವು ಸುಲಿಗೆಯಾಗುವವು; ದನಗಳ ಸಮೂಹವು ಸುಲಿಗೆ ಯಾಗುವದು; ಕಟ್ಟ ಕಡೆಯ ಮೂಲೆಗಳಲ್ಲಿ ಇರುವ ವರನ್ನು ಎಲ್ಲಾ ದಿಕ್ಕುಗಳಿಗೂ ಚದರಿಸುತ್ತೇನೆ; ಎಲ್ಲಾ ಕಡೆಯಿಂದ ಅವರನ್ನು ಸಂಹರಿಸುತ್ತೇನೆಂದು ಕರ್ತನು ಅನ್ನುತ್ತಾನೆ.

33ಹಾಚೋರು ಮೃಗಗಳ ನಿವಾಸವೂ ಎಂದೆಂದಿಗೂ ಹಾಳಾದ ಸ್ಥಳವೂ ಆಗುವದು; ಅಲ್ಲಿ ಯಾವನಾದರೂ ವಾಸಮಾಡುವದಿಲ್ಲ; ಅಲ್ಲಿ ಯಾವ ನರಪುತ್ರನಾದರೂ ತಂಗುವದಿಲ್ಲ.

ಯೆರೆಮಿಯ 49 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी