ನೀನು ನಿನ್ನ ಬಲದಿಂದ ಸಮುದ್ರವನ್ನು ಭೇದಿಸಿದಿ; ತಿಮಿಂಗಿಲಗಳ ತಲೆಗಳನ್ನು ನೀರುಗಳಲ್ಲಿ ಜಜ್ಜಿಬಿಟ್ಟಿ.
11ಯಾಕೆ ನಿನ್ನ ಕೈಯನ್ನು, ನಿನ್ನ ಬಲಗೈ ಯನ್ನು ಸಹ ಹಿಂದೆಳಿಯುತ್ತೀ? ನಿನ್ನ ಎದೆಯೊಳಗಿಂದ ಅದನ್ನು ಹೊರತೆಗೆ.
12ದೇವರು ಪೂರ್ವದಿಂದಲೂ ನನ್ನ ಅರಸನೂ ಭೂಮಿಯ ಮಧ್ಯದಲ್ಲಿ ರಕ್ಷಣೆಯನ್ನು ಮಾಡುವಾತನೂ ಆಗಿದ್ದಾನೆ.
13ನೀನು ನಿನ್ನ ಬಲದಿಂದ ಸಮುದ್ರವನ್ನು ಭೇದಿಸಿದಿ; ತಿಮಿಂಗಿಲಗಳ ತಲೆಗಳನ್ನು ನೀರುಗಳಲ್ಲಿ ಜಜ್ಜಿಬಿಟ್ಟಿ.
14ನೀನು ಲಿವ್ಯಾತಾನದ ತಲೆ ಗಳನ್ನು ಒಡೆದು ತುಂಡು ತುಂಡುಮಾಡಿದಿ. ಅದನ್ನು ಅರಣ್ಯದ ಜನರಿಗೆ ಆಹಾರವಾಗಿ ಕೊಟ್ಟಿ.
15ನೀನು ಬುಗ್ಗೆಯನ್ನೂ ಪ್ರವಾಹವನ್ನೂ ವಿಭಾಗಮಾಡಿದಿ; ಮಹಾ ನದಿಗಳನ್ನು ಒಣಗಿಸಿದಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ