ಯೆರೆಮಿಯ 49:6

ಆದರೆ ತರುವಾಯ ಅಮ್ಮೋನನ ಮಕ್ಕಳನ್ನು ಸೆರೆಯಿಂದ ತಿರುಗಿ ತರುವೆನೆಂದು ಕರ್ತನು ಅನ್ನುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 49

4ಹಿಂತಿರುಗು, ಹಿಂಜರಿದು ಹೋದ ಮಗಳೇ, ನನ್ನ ಬಳಿಗೆ ಬರುವವರು ಯಾರೆಂದು ಹೇಳಿ ನಿನ್ನ ಬೊಕ್ಕಸ ಗಳಲ್ಲಿ ನಂಬಿಕೆ ಇಟ್ಟವಳೇ, ನಿನ್ನ ತಗ್ಗು ಹರಿದು ಹೋಗುತ್ತದಲ್ಲಾ? ತಗ್ಗುಗಳ ವಿಷಯ ಯಾಕೆ ಹೆಚ್ಚಳ ಪಡುತ್ತೀ?

5ಇಗೋ, ನಾನು ನಿನ್ನ ಸುತ್ತಲಿರುವ ವರೆಲ್ಲರಿಂದ ನಿನ್ನ ಮೇಲೆ ಭಯವನ್ನು ಬರಮಾಡು ವೆನೆಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ. ಆಗ ನಿಮ್ಮಲ್ಲಿ ಒಬ್ಬೊಬ್ಬನು ಮುಂದಕ್ಕೆ ಓಡಿಸಲ್ಪಡುವನು; ಅಲೆದಾಡುವವನನ್ನು ಕೂಡಿಸುವವನೂ ಒಬ್ಬನೂ ಇರುವದಿಲ್ಲ.

6ಆದರೆ ತರುವಾಯ ಅಮ್ಮೋನನ ಮಕ್ಕಳನ್ನು ಸೆರೆಯಿಂದ ತಿರುಗಿ ತರುವೆನೆಂದು ಕರ್ತನು ಅನ್ನುತ್ತಾನೆ.

7ಎದೋಮಿನ ವಿಷಯವಾಗಿ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತೇಮಾನ್‌ನಲ್ಲಿ ಇನ್ನು ಮೇಲೆ ಜ್ಞಾನವಿರುವದಿಲ್ಲವೋ? ವಿವೇಕಿಗಳಿಂದ ಆಲೋಚ ನೆಯು ನಾಶವಾಯಿತೋ? ಅವರ ಜ್ಞಾನವು ಕಾಣದೆ ಹೋಯಿತೋ?

8ದೇದಾನಿನ ನಿವಾಸಿಗಳೇ, ಓಡಿ ಹೋಗಿರಿ, ತಿರುಗಿಕೊಳ್ಳಿರಿ, ಆಳವಾದ ಸ್ಥಳದಲ್ಲಿ ವಾಸಮಾಡಿರಿ. ಏಸಾವಿನ ಆಪತ್ತನ್ನೂ ನಾನು ಅವನನ್ನು ವಿಚಾರಿಸುವ ಕಾಲವನ್ನು ಅವನ ಮೇಲೆ ಬರಮಾಡು ತ್ತೇನೆ.

ಯೆರೆಮಿಯ 49 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी