ನೆಹೆಮಿಯ 12:40

ತರುವಾಯ ಸ್ತುತಿಮಾಡುವ ಎರಡು ಗುಂಪು ಗಳೂ ನಾನೂ ನನ್ನ ಸಂಗಡ ಇದ್ದ ಅರ್ಧಮಂದಿ ಅಧಿಕಾರಸ್ತರೂ ದೇವರ ಆಲಯದಲ್ಲಿ ನಿಂತಿದ್ದೆವು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 12

38ಸ್ತುತಿಸುವ ಮತ್ತೊಂದು ಗುಂಪಿನವರು ಅವರಿಗೆ ದುರಾಗಿ ನಡೆದರು; ನಾನು ಅವರ ಹಿಂದೆ ನಡೆದೆನು. ಗೋಡೆಯ ಮೇಲೆ ಇದ್ದ ಅರ್ಧ ಜನರು ಬುರುಜುಗಳ ಗೋಪುರದ ಆಚೆಯಿಂದ ನಡೆದು ಅಗಲವಾದ ಗೋಡೆ ಯನ್ನು

39ಎಫ್ರಾಯಾಮಿನ ಬಾಗಲ ಮೇಲೆಯೂ ಹಳೇ ಬಾಗಲ ಮೇಲೇಯೂ ವಿಾನಿನ ಬಾಗಲ ಮೇಲೆಯೂ ಹಾದು ಹನನೇಲನ ಗೋಪುರವನ್ನೂ ಹಮ್ಮೋಯಾ ಗೋಪುರವನ್ನೂ ದಾಟಿ ಕುರಿಬಾಗಲ ವರೆಗೆ ಬಂದು ಸೆರೆಮನೆಯ ಬಾಗಲ ಬಳಿಯಲ್ಲಿ ನಿಂತರು.

40ತರುವಾಯ ಸ್ತುತಿಮಾಡುವ ಎರಡು ಗುಂಪು ಗಳೂ ನಾನೂ ನನ್ನ ಸಂಗಡ ಇದ್ದ ಅರ್ಧಮಂದಿ ಅಧಿಕಾರಸ್ತರೂ ದೇವರ ಆಲಯದಲ್ಲಿ ನಿಂತಿದ್ದೆವು.

41ಆಗ ಯಾಜಕರಾದ ಎಲ್ಯಾಕೀಮನೂ ಮಾಸೇ ಯನೂ ಮಿನ್ಯಾವಿಾನನೂ ವಿಾಕಾಯನೂ ಎಲ್ಯೋ ವೇನೈಯನೂ ಜೆಕರ್ಯನೂ ಹನನ್ಯನೂ ತುತೂರಿ ಗಳನ್ನು ಹಿಡಿದುಕೊಂಡವರು;

42ಮಾಸೇಯನೂ ಶೆಮಾಯನೂ ಎಲ್ಲಾಜಾರನೂ ಉಜ್ಜೀಯೂ ಯೆಹೋ ಹಾನಾನನೂ ಮಲ್ಕೀಯನೂ ಏಲಾಮನೂ ಎಜೆರನು; ತಮ್ಮ ಮೇಲ್ವಿಚಾರಕನಾದ ಇಜ್ರಹ್ಯನ ಸಂಗಡ ಹಾಡುಗಾರರು ಗಟ್ಟಿಯಾಗಿ ಹಾಡಿದರು.

ನೆಹೆಮಿಯ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी