ಯೆಹೆಜ್ಕೇಲನು 27:22

ಶೆಬ ದವರು, ರಗ್ಮದವರು ನಿನ್ನ ಕಡೆಯ ವರ್ತಕರಾಗಿ ಶ್ರೇಷ್ಟವಾದ ಎಲ್ಲಾ ಸುಗಂಧ ದ್ರವ್ಯದಿಂದಲೂ ಬೆಲೆ ಯುಳ್ಳ ಎಲ್ಲಾ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 27

20ದೇದಾನು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು.

21ಅರಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ವ್ಯಾಪಾರಿಗಳಾಗಿದ್ದರು; ಕುರಿಮರಿಗಳಿಂದಲೂ ಟಗರುಗಳಿಂದಲೂ ಹೋತಗ ಳಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದರು.

22ಶೆಬ ದವರು, ರಗ್ಮದವರು ನಿನ್ನ ಕಡೆಯ ವರ್ತಕರಾಗಿ ಶ್ರೇಷ್ಟವಾದ ಎಲ್ಲಾ ಸುಗಂಧ ದ್ರವ್ಯದಿಂದಲೂ ಬೆಲೆ ಯುಳ್ಳ ಎಲ್ಲಾ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.

23ಹಾರಾನ್‌, ಕನ್ನೆ, ಏದೆನ್‌, ಶೆಬ, ಅಶ್ಶೂರ್‌ ಮತ್ತು ಕಿಲ್ಮದ್‌ವರು ನಿನ್ನ ವ್ಯಾಪಾರಿಗಳಾಗಿದ್ದರು.

24ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಅಂದರೆ ನೀಲಿಬಟ್ಟೆಗಳು, ಕಸೂತಿಯ ಕೆಲಸ ದೇವ ದಾರುವಿನಿಂದ ಮಾಡಿ ಹಗ್ಗಗಳಿಂದ ಕಟ್ಟಿದಂತ, ರೇಷ್ಮೆ ತುಂಬಿಸಿದ ಪೆಟ್ಟಿಗೆಗಳನ್ನು ತಂದು ನಿನ್ನ ಪಟ್ಟಣಗಳಲ್ಲಿ ವರ್ತಕರಾಗಿದ್ದರು.

ಯೆಹೆಜ್ಕೇಲನು 27 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी