ಯೆಹೋಶುವ 7:18

ಅವನ ಮನೆಯವರನ್ನು ಅವನು ಹೆಸರುಹೆಸರಾಗಿ ಕರೆದಾಗ ಯೂದನ ಗೋತ್ರದ ಜೆರಹನ ಮಗನಾದ ಜಬ್ದೀಯ ಮಗನಾದ ಕರ್ವಿಾಯ ಮಗನಾದ ಆಕಾನನು ಹಿಡಿಯಲ್ಪಟ್ಟನು.

ಸಂದರ್ಭದೊಂದಿಗೆ ಓದಿ · ಯೆಹೋಶುವ 7

16ಹೀಗೆಯೇ ಯೆಹೋಶುವನು ಬೆಳಿಗ್ಗೆ ಎದ್ದು ಇಸ್ರಾಯೇಲನ್ನು ಗೋತ್ರಗೋತ್ರವಾಗಿ ಕರೆದಾಗ ಯೂದ ಗೋತ್ರವು ಹಿಡಿಯಲ್ಪಟ್ಟಿತು.

17ಅವನು ಯೂದನ ಕುಟುಂಬವನ್ನು ಕರೆದಾಗ ಜೆರಹನ ಗೋತ್ರವು ಹಿಡಿಯಲ್ಪಟ್ಟಿತು. ಜೆರಹನ ಗೋತ್ರವನ್ನು ಹೆಸರು ಹೆಸರಾಗಿ ಕರೆದಾಗ ಜಬ್ದೀಯು ಹಿಡಿಯಲ್ಪಟ್ಟನು.

18ಅವನ ಮನೆಯವರನ್ನು ಅವನು ಹೆಸರುಹೆಸರಾಗಿ ಕರೆದಾಗ ಯೂದನ ಗೋತ್ರದ ಜೆರಹನ ಮಗನಾದ ಜಬ್ದೀಯ ಮಗನಾದ ಕರ್ವಿಾಯ ಮಗನಾದ ಆಕಾನನು ಹಿಡಿಯಲ್ಪಟ್ಟನು.

19ಆಗ ಯೆಹೋಶುವನು ಆಕಾನನಿಗೆ--ನನ್ನ ಮಗನೇ, ನೀನು ಈಗ ಇಸ್ರಾ ಯೇಲಿನ ದೇವರಾದ ಕರ್ತನನ್ನು ಘನಪಡಿಸಿ ಆತನಿಗೆ ಅರಿಕೆಮಾಡು; ಏನು ಮಾಡಿದಿಯೋ ಅದನ್ನು ನನಗೆ ತಿಳಿಸು; ನನಗೆ ಮರೆಮಾಡಬೇಡ ಅಂದನು.

20ಆಗ ಆಕಾನನು ಯೆಹೋಶುವನಿಗೆ ಪ್ರತ್ಯುತ್ತರವಾಗಿ--ನಿಜವಾಗಿ ನಾನು ಇಸ್ರಾಯೇಲ್‌ ದೇವರಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿ ಇಂತಿಂಥವುಗಳನ್ನು ಮಾಡಿದ್ದೇನೆ.

ಯೆಹೋಶುವ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी