ಯೆಹೋಶುವ 11:11

ಅವರು ಶ್ವಾಸವುಳ್ಳ ಒಂದನ್ನಾದರೂ ಉಳಿಸದೆ ಅದರಲ್ಲಿರುವ ಪ್ರಾಣಗಳನ್ನೆಲ್ಲಾ ಕತ್ತಿಯಿಂದ ಹೊಡೆದು ಸಂಪೂರ್ಣವಾಗಿ ನಾಶಮಾಡಿ ಹಾಚೋರನ್ನು ಬೆಂಕಿ ಯಿಂದ ಸುಟ್ಟುಬಿಟ್ಟರು.

ಸಂದರ್ಭದೊಂದಿಗೆ ಓದಿ · ಯೆಹೋಶುವ 11

9ಕರ್ತನು ತನಗೆ ಹೇಳಿದ ಪ್ರಕಾರವೇ ಯೆಹೋಶು ವನು ಅವರ ಕುದುರೆಗಳ ಹಿಂಗಾಲಿನ ನರವನ್ನು ಕೊಯಿದುಬಿಟ್ಟು ಅವರ ರಥಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟನು.

10ಆ ಕಾಲದಲ್ಲಿ ಯೆಹೋಶುವನು ತಿರಿಗಿಕೊಂಡು ಹಾಚೋರನ್ನು ಹಿಡಿದು ಅದರ ಅರಸನನ್ನು ಕತ್ತಿ ಯಿಂದ ಹೊಡೆದುಬಿಟ್ಟನು. ಯಾಕಂದರೆ ಹಾಚೋರು ಮೊದಲು ಆ ರಾಜ್ಯಗಳಿಗೆಲ್ಲಾ ತಲೆಯಾಗಿತ್ತು.

11ಅವರು ಶ್ವಾಸವುಳ್ಳ ಒಂದನ್ನಾದರೂ ಉಳಿಸದೆ ಅದರಲ್ಲಿರುವ ಪ್ರಾಣಗಳನ್ನೆಲ್ಲಾ ಕತ್ತಿಯಿಂದ ಹೊಡೆದು ಸಂಪೂರ್ಣವಾಗಿ ನಾಶಮಾಡಿ ಹಾಚೋರನ್ನು ಬೆಂಕಿ ಯಿಂದ ಸುಟ್ಟುಬಿಟ್ಟರು.

12ಇದಲ್ಲದೆ ಯೆಹೋಶುವನು ಆ ಅರಸುಗಳ ಸಮಸ್ತ ಪಟ್ಟಣಗಳನ್ನೂ ಅವುಗಳ ಸಮಸ್ತ ಅರಸುಗಳನ್ನೂ ಹಿಡಿದು ಕತ್ತಿಯಿಂದ ಹೊಡೆದು ಕರ್ತನ ಸೇವಕನಾದ ಮೋಶೆಯು ಆಜ್ಞಾಪಿಸಿದ ಹಾಗೆಯೇ ಅವರನ್ನು ಸಂಪೂರ್ಣ ನಾಶಮಾಡಿಬಿಟ್ಟನು.

13ಆದರೆ ತಮ್ಮ ದಿನ್ನೆಯ ಮೇಲೆ ನಿಂತಿರುವ ಪಟ್ಟಣ ಗಳನ್ನೆಲ್ಲಾ ಇಸ್ರಾಯೇಲ್‌ ಸುಟ್ಟು ಬಿಡಲಿಲ್ಲ. ಹಾಚೋರನ್ನು ಮಾತ್ರ ಯೆಹೋಶುವನು ಸುಟ್ಟು ಬಿಟ್ಟನು.

ಯೆಹೋಶುವ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी