ನ್ಯಾಯಸ್ಥಾಪಕರು 18:13

ಇಗೋ, ಅದು ಕಿರ್ಯತ್ಯಾರೀಮಿನ ಹಿಂದೆ ಇರುವದು. ಅಲ್ಲಿಂದ ಅವರು ಎಫ್ರಾಯಾಮ್‌ ಬೆಟ್ಟಕ್ಕೆ ಹೋಗಿ ವಿಾಕನ ಮನೆಯ ವರೆಗೆ ಬಂದರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 18

11ಆಗ ಚೊರ್ಗಾದಲ್ಲಿಯೂ ಎಷ್ಟಾವೋಲಿನ ಲ್ಲಿಯೂ ಇರುವ ದಾನನ ಕುಟುಂಬದವರಲ್ಲಿ ಆರು ನೂರು ಮನುಷ್ಯರು ಯುದ್ಧಕ್ಕೆ ತಕ್ಕ ಆಯುಧಗಳನ್ನು ಕಟ್ಟಿಕೊಂಡು ಅಲ್ಲಿಂದ ಹೊರಟುಹೋಗಿ

12ಯೆಹೂದ ದಲ್ಲಿರುವ ಕಿರ್ಯತ್ಯಾರೀಮಿನಲ್ಲಿ ಇಳುಕೊಂಡರು. ಆದದರಿಂದ ಆ ಸ್ಥಳಕ್ಕೆ ಈ ದಿನದವರೆಗೂ ಮಹನೇ ದಾನ್‌ ಎಂದು ಕರೆಯಲ್ಪಡುವದು.

13ಇಗೋ, ಅದು ಕಿರ್ಯತ್ಯಾರೀಮಿನ ಹಿಂದೆ ಇರುವದು. ಅಲ್ಲಿಂದ ಅವರು ಎಫ್ರಾಯಾಮ್‌ ಬೆಟ್ಟಕ್ಕೆ ಹೋಗಿ ವಿಾಕನ ಮನೆಯ ವರೆಗೆ ಬಂದರು.

14ಆಗ ಲಯಿಷಿನ ದೇಶವನ್ನು ಪಾಳತಿ ನೋಡಿಬಂದ ಆ ಐದು ಮಂದಿ ಮನುಷ್ಯರು ತಮ್ಮ ಸಹೋದರರರಿಗೆ ಉತ್ತರ ಕೊಟ್ಟುಈ ಮನೆಗಳಲ್ಲಿ ಏಫೋದೂ ಪ್ರತಿಮೆಗಳೂ ಕೆತ್ತಿದ ವಿಗ್ರಹವೂ ಎರಕದ ವಿಗ್ರಹವೂ ಉಂಟೆಂದು ನೀವು ಅರಿಯಿರಾ? ನೀವು ಈಗ ಮಾಡಬೇಕಾದದ್ದೇನೆಂದು ತಿಳುಕೊಳ್ಳಿರಿ ಅಂದರು.

15ಅವರು ಅಲ್ಲಿಗೆ ಹೋಗಿ ವಿಾಕನ ಮನೆಯಲ್ಲಿರುವ ಯೌವನಸ್ಥನಾದ ಲೇವಿ ಯನ ಬಳಿಗೆ ಬಂದು ಅವನನ್ನು ವಂದಿಸಿದರು.

ನ್ಯಾಯಸ್ಥಾಪಕರು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी