ಯೋಬನು 2:9

ಆಗ ಅವನ ಹೆಂಡತಿಯು ಅವನಿಗೆ--ಇನ್ನೂ ಯಥಾರ್ಥ ತ್ವದಲ್ಲಿ ಉಳಿದಿದ್ದೀಯೋ? ದೇವರನ್ನು ಶಪಿಸಿ ಸಾಯಿ ಅಂದಳು.

ಸಂದರ್ಭದೊಂದಿಗೆ ಓದಿ · ಯೋಬನು 2

7ಆಗ ಸೈತಾನನು ಕರ್ತನ ಸಮ್ಮುಖ ದಿಂದ ಹೊರಟು ಯೋಬನಿಗೆ ಅಂಗಾಲಿನಿಂದ ನೆತ್ತಿಯ ವರೆಗೆ ಕೆಟ್ಟ ಹುಣ್ಣುಗಳು ಬರುವ ಹಾಗೆ ಅವನನ್ನು ಹೊಡೆದನು.

8ಅವನು ಬೋಕಿ ತಕ್ಕೊಂಡು ತನ್ನನ್ನು ತುರಿಸಿಕೊಂಡು ಬೂದಿಯ ನಡುವೆ ಕೂತನು.

9ಆಗ ಅವನ ಹೆಂಡತಿಯು ಅವನಿಗೆ--ಇನ್ನೂ ಯಥಾರ್ಥ ತ್ವದಲ್ಲಿ ಉಳಿದಿದ್ದೀಯೋ? ದೇವರನ್ನು ಶಪಿಸಿ ಸಾಯಿ ಅಂದಳು.

10ಆದರೆ ಅವನು ಅವಳಿಗೆ--ಮೂರ್ಖ ಹೆಂಗಸರಲ್ಲಿ ಒಬ್ಬಳು ಮಾತನಾಡುವ ಪ್ರಕಾರ ನೀನೂ ಮಾತನಾಡುವಿಯಾ? ದೇವರ ಕೈಯಿಂದ ಒಳ್ಳೇದನ್ನು ಹೊಂದುತ್ತೇವಲ್ಲಾ? ಕೆಟ್ಟದ್ದನ್ನು ಹೊಂದುವದು ಬೇಡವೋ ಅಂದನು. ಇವೆಲ್ಲವುಗಳಲ್ಲಿ ಯೋಬನು ತನ್ನ ತುಟಿಗಳಿಂದ ಪಾಪಮಾಡಲಿಲ್ಲ.

11ಇದಲ್ಲದೆ ಯೋಬನ ಮೂವರು ಸ್ನೇಹಿತರು ಅವನ ಮೇಲೆ ಬಂದ ಈ ಎಲ್ಲಾ ಕೇಡನ್ನು ಕುರಿತು ಕೇಳಿ ತಮ್ಮ ತಮ್ಮ ಸ್ಥಳಗಳಿಂದ ಬಂದರು. ಅವರಾ ರಂದರೆ; ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು; ಇವರು ಅವನಿಗೋಸ್ಕರ ಗೋಳಾಡುವದಕ್ಕೂ ಅವನನ್ನು ಸಂತೈ ಸುವದಕ್ಕೂ ಹೋಗಬೇಕೆಂದು ತಮ್ಮಲ್ಲಿ ಆಲೋಚನೆ ಮಾಡಿಕೊಂಡರು.

ಯೋಬನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी