ಲೂಕನು 11:15

ಆದರೆ ಅವರಲ್ಲಿ ಕೆಲವರು--ದೆವ್ವಗಳ ಅಧಿಪತಿಯಾದ ಬೆಲ್ಜೆ ಬೂಲನಿಂದ ಅವನು ದೆವ್ವಗಳನ್ನು ಬಿಡಿಸುತ್ತಾನೆ ಅಂದರು.

ಸಂದರ್ಭದೊಂದಿಗೆ ಓದಿ · ಲೂಕನು 11

13ಹಾಗಾದರೆ ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೇದಾನಗಳನ್ನು ಕೊಡುವದು ಹೇಗೆಂಬದನ್ನು ತಿಳಿ ದವರಾಗಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತನ್ನನ್ನು ಬೇಡಿಕೊಳ್ಳುವವರಿಗೆ ಪವಿ ತ್ರಾತ್ಮನನ್ನು ದಯಪಾಲಿಸುವನಲ್ಲವೇ?

14ತರುವಾಯ ಆತನು ಒಂದು ಮೂಕದೆವ್ವವನ್ನು ಹೊರಡಿಸುತ್ತಿರುವಾಗ ಆದದ್ದೇನಂದರೆ, ಆ ದೆವ್ವವು ಹೊರಟು ಹೋದ ಮೇಲೆ ಆ ಮೂಕನು ಮಾತನಾಡಿ ದನು; ಅದಕ್ಕೆ ಜನರು ಆಶ್ಚರ್ಯಪಟ್ಟರು.

15ಆದರೆ ಅವರಲ್ಲಿ ಕೆಲವರು--ದೆವ್ವಗಳ ಅಧಿಪತಿಯಾದ ಬೆಲ್ಜೆ ಬೂಲನಿಂದ ಅವನು ದೆವ್ವಗಳನ್ನು ಬಿಡಿಸುತ್ತಾನೆ ಅಂದರು.

16ಬೇರೆಯವರು ಆತನನ್ನು ಶೋಧಿಸುವವ ರಾಗಿ ಆಕಾಶದಿಂದ ಒಂದು ಸೂಚಕ ಕಾರ್ಯವನ್ನು ತೋರಿಸುವಂತೆ ಆತನನ್ನು ಕೇಳಿದರು.

17ಆದರೆ ಆತನು ಅವರ ಅಲೋಚನೆಗಳನ್ನು ತಿಳಿದವನಾಗಿ ಅವರಿಗೆ--ತನ್ನಲ್ಲಿ ವಿರೋಧವಾಗಿ ವಿಭಾಗಿಸಲ್ಪಟ್ಟ ಪ್ರತಿಯೊಂದು ರಾಜ್ಯವು ಹಾಳಾಗುವದು; ಒಂದು ಮನೆಯು ತನಗೆ ವಿರೋಧವಾಗಿ ವಿಭಾಗಿಸಲ್ಪಟ್ಟರೆ ಅದು ಬಿದ್ದು ಹೋಗುವದು.

ಲೂಕನು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी