ಯೆರೆಮಿಯ 14:19

ನೀನು ಯೆಹೂದವನ್ನು ಪೂರ್ಣವಾಗಿ ತಳ್ಳಿ ದ್ದೀಯೋ? ನಿನ್ನ ಪ್ರಾಣವು ಚೀಯೋನನ್ನು ಅಸಹ್ಯಿ ಸುತ್ತದೋ? ನಮ್ಮನ್ನು ಯಾಕೆ ಹೊಡೆದಿದ್ದೀ? ನಮಗೆ ಗುಣವಾಗಲಿಲ್ಲ; ಸಮಾಧಾನವನ್ನು ನಿರೀಕ್ಷಿಸಿದೆವು, ಆದರೆ ಒಳ್ಳೇದೆನೂ ಇಲ್ಲ; ಗುಣವಾಗುವ ಕಾಲವನ್ನು ಸಹ ನಿರೀಕ್ಷಿಸಿದೆವು, ಆದರೆ ಇಗೋ, ಸಂಕಟ!

ಸಂದರ್ಭದೊಂದಿಗೆ ಓದಿ · ಯೆರೆಮಿಯ 14

17ಆದದರಿಂದ ನೀನು ಈ ಮಾತನ್ನು ಅವರಿಗೆ ಹೇಳಬೇಕು--ನನ್ನ ಕಣ್ಣುಗಳು ರಾತ್ರಿ ಹಗಲು ಬಿಡದೆ ಕಣ್ಣೀರು ಸುರಿಸಲಿ; ಯಾಕಂದರೆ ನನ್ನ ಜನರ ಮಗಳಾದ ಕನ್ಯೆಯು ಕ್ರೂರವಾದ ದೊಡ್ಡ ಏಟಿನಿಂದಲೂ ಪೆಟ್ಟಿನಿಂದಲೂ ಮುರಿಯಲ್ಪಟ್ಟಳು.

18ನಾನು ಹೊಲಕ್ಕೆ ಹೋದರೆ, ಇಗೋ, ಕತ್ತಿಯಿಂದ ಕೊಲ್ಲಲ್ಪಟ್ಟವರು ಪಟ್ಟಣದಲ್ಲಿ ಪ್ರವೇಶಿಸಿದರೆ, ಇಗೋ, ಕ್ಷಾಮದಿಂದ ರೋಗದಲ್ಲಿ ಬಿದ್ದವರು. ಹೌದು, ಪ್ರವಾದಿಯೂ ಯಾಜಕನೂ ತಮಗೆ ತಿಳಿಯದ ದೇಶಕ್ಕೆ ಸಂಚಾರ ಮಾಡುವರು.

19ನೀನು ಯೆಹೂದವನ್ನು ಪೂರ್ಣವಾಗಿ ತಳ್ಳಿ ದ್ದೀಯೋ? ನಿನ್ನ ಪ್ರಾಣವು ಚೀಯೋನನ್ನು ಅಸಹ್ಯಿ ಸುತ್ತದೋ? ನಮ್ಮನ್ನು ಯಾಕೆ ಹೊಡೆದಿದ್ದೀ? ನಮಗೆ ಗುಣವಾಗಲಿಲ್ಲ; ಸಮಾಧಾನವನ್ನು ನಿರೀಕ್ಷಿಸಿದೆವು, ಆದರೆ ಒಳ್ಳೇದೆನೂ ಇಲ್ಲ; ಗುಣವಾಗುವ ಕಾಲವನ್ನು ಸಹ ನಿರೀಕ್ಷಿಸಿದೆವು, ಆದರೆ ಇಗೋ, ಸಂಕಟ!

20ಓ ಕರ್ತನೇ, ನಮ್ಮ ದುಷ್ಟತ್ವವನ್ನೂ ನಮ್ಮ ತಂದೆಗಳ ಅಕ್ರಮವನ್ನೂ ನಾವು ಅರಿಕೆ ಮಾಡುತ್ತೇವೆ. ನಿನಗೆ ವಿರೋಧವಾಗಿ ನಾವು ಪಾಪ ಮಾಡಿದ್ದೇವೆ.

21ನಿನ್ನ ಹೆಸರಿಗೋಸ್ಕರ ನಮ್ಮನ್ನು ಅಸಹ್ಯಿಸಿ ಬಿಡಬೇಡ; ನಿನ್ನ ಮಹಿಮೆಯ ಸಿಂಹಾಸನವನ್ನು ಅವಮಾನ ಮಾಡ ಬೇಡ; ಜ್ಞಾಪಕಮಾಡು; ನಮ್ಮ ಸಂಗಡ ನೀನು ಮಾಡಿದ ಒಡಂಬಡಿಕೆಯನ್ನು ಮುರಿಯಬೇಡ.

ಯೆರೆಮಿಯ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी