೨ ಅರಸುಗಳು 25:23

ಆದರೆ ಬಾಬೆಲಿನ ಅರಸನು ಗೆದಲ್ಯನನ್ನು ಅಧಿಪತಿ ಯಾಗಿ ಮಾಡಿದ್ದಾನೆಂದು ದಂಡುಗಳ ಅಧಿಪತಿಗಳೂ ಅವರ ಜನರೂ ಕೇಳಿದ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನೂ ಕಾರೇಹನ ಮಗನಾದ ಯೋಹಾ ನನೂ ನೆಟೋಫದವನಾದ ತನ್ಹುಮೆತನ ಮಗನಾದ ಸೆರಾಯನೂ ಮಾಕಾತ್ಯರಲ್ಲಿ ಒಬ್ಬನ ಮಗನಾದ ಯಾಜನ್ಯನೂ ಅವರ ಜನರೂ ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಬಂದರು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 25

21ಬಾಬೆಲಿನ ಅರಸನು ಹಮಾತ್‌ ರಿಬ್ಲ ದಲ್ಲಿ ಅವರನ್ನು ಹೊಡೆದು ಕೊಂದುಹಾಕಿದನು. ಈ ಪ್ರಕಾರವೇ ಯೆಹೂದ್ಯರು ತಮ್ಮ ದೇಶದಲ್ಲಿಂದ ಸೆರೆ ಯಾಗಿ ಒಯ್ಯಲ್ಪಟ್ಟರು.

22ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತಾನು ಯೆಹೂದ ದೇಶದಲ್ಲಿ ಉಳಿಸಿದ ಜನರ ಮೇಲೆ ಶಾಫಾನನ ಮೊಮ್ಮಗನೂ ಅಹೀಕಾಮನ ಮಗನೂ ಆದ ಗೆದಲ್ಯನನ್ನು ಅಧಿಪತಿಯಾಗಿ ಮಾಡಿದನು.

23ಆದರೆ ಬಾಬೆಲಿನ ಅರಸನು ಗೆದಲ್ಯನನ್ನು ಅಧಿಪತಿ ಯಾಗಿ ಮಾಡಿದ್ದಾನೆಂದು ದಂಡುಗಳ ಅಧಿಪತಿಗಳೂ ಅವರ ಜನರೂ ಕೇಳಿದ ಮೇಲೆ ನೆತನ್ಯನ ಮಗನಾದ ಇಷ್ಮಾಯೇಲನೂ ಕಾರೇಹನ ಮಗನಾದ ಯೋಹಾ ನನೂ ನೆಟೋಫದವನಾದ ತನ್ಹುಮೆತನ ಮಗನಾದ ಸೆರಾಯನೂ ಮಾಕಾತ್ಯರಲ್ಲಿ ಒಬ್ಬನ ಮಗನಾದ ಯಾಜನ್ಯನೂ ಅವರ ಜನರೂ ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಬಂದರು.

24ಆಗ ಗೆದಲ್ಯನು ಅವರಿಗೂ ಅವರ ಜನರಿಗೂ ಆಣೆಯನ್ನಿಟ್ಟು--ನೀವು ಕಸ್ದೀಯರನ್ನು ಸೇವಿಸಲು ಭಯಪಡಬೇಡಿರಿ; ದೇಶದಲ್ಲಿ ವಾಸವಾ ಗಿದ್ದು ಬಾಬೆಲಿನ ಅರಸನನ್ನು ಸೇವಿಸಿರಿ; ಆಗ ನಿಮಗೆ ಒಳ್ಳೇದಾಗಿರುವದು ಅಂದನು.

25ಆದರೆ ಏಳನೇ ತಿಂಗಳಲ್ಲಿ ರಾಜ ಸಂತಾನದವನಾದ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇ ಲನು ಅವನ ಸಂಗಡ ಹತ್ತು ಮಂದಿ ಬಂದು ಗೆದಲ್ಯ ನನ್ನೂ ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನೂ ಕಸ್ದೀಯರನ್ನೂ ಹೊಡೆದು ಕೊಂದುಹಾಕಿದರು.

೨ ಅರಸುಗಳು 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी