ಅಪೊಸ್ತಲರ ಕೃತ್ಯಗಳು 4:10

ನಿಮ್ಮೆಲ್ಲರಿಗೂ ಎಲ್ಲಾ ಇಸ್ರಾಯೇಲ್ಯರಿಗೂ ತಿಳಿಯಬೇಕಾದದ್ದೇ ನಂದರೆ, ಆತನಿಂದಲೇ ಅಂದರೆ ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿ ನಿಂದಲೇ ಈ ಮನುಷ್ಯನು ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುತ್ತಾನೆ.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 4

8ಆಗ ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ--ಜನರ ಅಧಿಕಾರಿಗಳೇ, ಇಸ್ರಾಯೇಲಿನ ಹಿರಿಯರೇ,

9ಈ ದುರ್ಬಲನಿಗೆ ಸ್ವಸ್ಥವಾದ ಒಳ್ಳೇ ಕಾರ್ಯವು ಹೇಗಾಯಿತೆಂಬ ವಿಷಯವಾಗಿ ಈ ದಿವಸ ನಾವು ವಿಚಾರಿಸಲ್ಪಡುವದಾದರೆ

10ನಿಮ್ಮೆಲ್ಲರಿಗೂ ಎಲ್ಲಾ ಇಸ್ರಾಯೇಲ್ಯರಿಗೂ ತಿಳಿಯಬೇಕಾದದ್ದೇ ನಂದರೆ, ಆತನಿಂದಲೇ ಅಂದರೆ ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿ ನಿಂದಲೇ ಈ ಮನುಷ್ಯನು ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುತ್ತಾನೆ.

11ಮನೆ ಕಟ್ಟುವವರಾದ ನಿಮ್ಮಿಂದ ಹೀನೈಸಲ್ಪಟ್ಟ ಈ ಕಲ್ಲೇ ಮುಖ್ಯವಾದ ಮೂಲೆಗಲ್ಲಾ ಯಿತು.

12ರಕ್ಷಣೆಯು ಇನ್ನಾರಲ್ಲಿಯೂ ಇಲ್ಲ; ಯಾಕಂದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡ ಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.

ಅಪೊಸ್ತಲರ ಕೃತ್ಯಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी