ಧರ್ಮೋಪದೇಶಕಾಂಡ 10:15

ಆದರೂ ನಿನ್ನ ಪಿತೃಗಳ ಮೇಲೆ ಕರ್ತನು ತಾನೇ ಮನಸ್ಸಿಟ್ಟು ಅವರನ್ನು ಪ್ರೀತಿಮಾಡಿ ಅವರ ಸಂತಾನವಾಗಿರುವ ನಿಮ್ಮನ್ನು ಈಹೊತ್ತು ಇರುವ ಪ್ರಕಾರ ಎಲ್ಲಾ ಜನಗಳೊಳಗಿಂದ ಆದುಕೊಂಡನು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 10

13ನಾನು ಈ ಹೊತ್ತು ನಿನ್ನ ಮೇಲಿಗಾಗಿ ನಿನಗೆ ಆಜ್ಞಾಪಿಸುವ ಕರ್ತನ ಆಜ್ಞೆಗಳನ್ನೂ ಆತನ ನಿಯಮಗಳನ್ನೂ ಅನು ಸರಿಸುವದೇ ಹೊರತು ಮತ್ತೇನು ನಿನ್ನ ದೇವರಾಗಿ ರುವ ಕರ್ತನು ನಿನ್ನಿಂದ ಕೇಳುತ್ತಾನೆ?

14ಇಗೋ, ಆಕಾಶವೂ ಆಕಾಶದಾಕಾಶವೂ ಭೂಮಿಯೂ ಅದರಲ್ಲಿ ರುವಂಥದ್ದೆಲ್ಲವೂ ನಿನ್ನ ದೇವರಾಗಿರುವ ಕರ್ತನವು ಗಳೇ.

15ಆದರೂ ನಿನ್ನ ಪಿತೃಗಳ ಮೇಲೆ ಕರ್ತನು ತಾನೇ ಮನಸ್ಸಿಟ್ಟು ಅವರನ್ನು ಪ್ರೀತಿಮಾಡಿ ಅವರ ಸಂತಾನವಾಗಿರುವ ನಿಮ್ಮನ್ನು ಈಹೊತ್ತು ಇರುವ ಪ್ರಕಾರ ಎಲ್ಲಾ ಜನಗಳೊಳಗಿಂದ ಆದುಕೊಂಡನು.

16ಹೀಗಿರುವದರಿಂದ ನಿಮ್ಮ ಹೃದಯದಲ್ಲೇ ಸುನ್ನತಿ ಮಾಡಿಕೊಳ್ಳಿರಿ. ಇನ್ನು ಮೇಲೆ ಬಗ್ಗದ ಕುತ್ತಿಗೆಯುಳ್ಳವ ರಾಗಿರಬೇಡಿರಿ.

17ನಿಮ್ಮ ದೇವರಾದ ಕರ್ತನು ಆತನೇ ದೇವರುಗಳ ದೇವರು, ಕರ್ತರ ಕರ್ತನು, ಮಹಾ ದೇವರು, ಪರಾಕ್ರಮಿಯೂ ಭಯಂಕರನೂ. ಆತನು ಮುಖದಾಕ್ಷಿಣ್ಯ ನೋಡುವದಿಲ್ಲ, ಲಂಚ ತೆಗೆದುಕೊಳ್ಳು ವದಿಲ್ಲ.

ಧರ್ಮೋಪದೇಶಕಾಂಡ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी