ನ್ಯಾಯಸ್ಥಾಪಕರು 7:22

ಮುನ್ನೂರು ಜನರು ತುತೂರಿಗಳನ್ನು ಊದುವಾಗ ಕರ್ತನು ದಂಡಿನಲ್ಲಿ ಎಲ್ಲೆಲ್ಲಿಯೂ ಒಬ್ಬನ ಕತ್ತಿಯನ್ನು ಒಬ್ಬನ ಮೇಲೆ ಬರಮಾಡಿದನು. ದಂಡು ಚೆರೇರಿನಲ್ಲಿರುವ ಬೇತ್ಷಿಟ್ಟದ ಮಟ್ಟಿಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾದ ಮೇರೆಯ ವರೆಗೂ ಓಡಿಹೋಯಿತು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 7

20ಈ ಮೂರು ಗುಂಪಿನ ಜನರು ತುತೂರಿಗಳನ್ನು ಊದಿ ಆ ಕೊಡಗಳನ್ನು ಒಡೆದುಬಿಟ್ಟು ಪಂಜುಗಳನ್ನು ತಮ್ಮ ಎಡಗೈಯಲ್ಲಿಯೂ ಊದುವ ತುತೂರಿಗಳನ್ನು ತಮ್ಮ ಬಲಗೈಯಲ್ಲಿಯೂ ಹಿಡಿದು--ಕರ್ತನ ಕತ್ತಿ, ಗಿದ್ಯೋನನ ಕತ್ತಿ ಎಂದು ಕೂಗಿ ದಂಡಿನ ಸುತ್ತಲೂ ಅವರವರು ತಮ್ಮ ಸ್ಥಳದಲ್ಲಿ ನಿಂತರು.

21ಆಗ ದಂಡೆಲ್ಲಾ ಕಿರಿಚಿಕೊಂಡು ಓಡಿ ಹೋದರು.

22ಮುನ್ನೂರು ಜನರು ತುತೂರಿಗಳನ್ನು ಊದುವಾಗ ಕರ್ತನು ದಂಡಿನಲ್ಲಿ ಎಲ್ಲೆಲ್ಲಿಯೂ ಒಬ್ಬನ ಕತ್ತಿಯನ್ನು ಒಬ್ಬನ ಮೇಲೆ ಬರಮಾಡಿದನು. ದಂಡು ಚೆರೇರಿನಲ್ಲಿರುವ ಬೇತ್ಷಿಟ್ಟದ ಮಟ್ಟಿಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾದ ಮೇರೆಯ ವರೆಗೂ ಓಡಿಹೋಯಿತು.

23ನಫ್ತಾಲಿ ಯಿಂದಲೂ ಆಶೇರನಿಂದಲೂ ಸಮಸ್ತ ಮನಸ್ಸೆಯ ವರೆಲ್ಲರೂ ಕೂಡಿಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು.

24ಇದಲ್ಲದೆ ಗಿದ್ಯೋನನು ಎಫ್ರಾಯಾಮ್‌ ಬೆಟ್ಟ ದಲ್ಲೆಲ್ಲಾ ದೂತರನ್ನು ಕಳುಹಿಸಿ--ನೀವು ಮಿದ್ಯಾನ್ಯರಿಗೆ ಎದುರಾಗಿ ಇಳಿದು ಹೋಗಿ ಬೇತ್‌ಬಾರ ಮತ್ತು ಯೊರ್ದನ್‌ ವರೆಗಿರುವ ನೀರುಗಳನ್ನು ಅವರಿಗೆ ಮುಂದಾಗಿ ಹಿಡಿಯಿರಿ ಎಂದು ಹೇಳಿದನು. ಹಾಗೆಯೇ ಎಫ್ರಾಯಾಮ್‌ ಮನುಷ್ಯರೆಲ್ಲರು ಕೂಡಿಕೊಂಡು ಬೇತ್‌ಬಾರ ಮತ್ತು ಯೊರ್ದನ್‌ ವರೆಗೆ ನೀರುಗಳನ್ನು ಹಿಡಿದರು.

ನ್ಯಾಯಸ್ಥಾಪಕರು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी