೧ ಅರಸುಗಳು 6:5

ಮಂದಿರದ ಸುತ್ತಲೂ ದೈವೋಕ್ತಿಯ ಸುತ್ತಲೂ ಗೋಡೆಗಳಿಗೆ ಸವಿಾಪವಾಗಿ ಕೊಠಡಿಗಳನ್ನು ಕಟ್ಟಿಸಿದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 6

3ಮನೆಯ ಮಂದಿರದ ಮುಂದೆ ದ್ವಾರಾಂಗಳವೂ ಇತ್ತು ಅದು ಮನೆಯ ಅಗಲದ ಪ್ರಕಾರ ಇಪ್ಪತ್ತು ಮೊಳ ಉದ್ದವಾಗಿತ್ತು; ಮನೆಯ ಮುಂದೆ ಇರುವ ಅದರ ಅಗಲವು ಹತ್ತು ಮೊಳವು.

4ಅವನು ಸಣ್ಣ ಕನ್ನಡಿಗಳುಳ್ಳ ಕಿಟಿಕಿಗಳನ್ನು ಮನೆಗೆ ಮಾಡಿಸಿದನು; ಇದಲ್ಲದೆ ಮನೆಯ ಗೋಡೆಗೆ ಸೇರಿದ್ದಾಗಿ ಸುತ್ತಲೂ ಕೊಠಡಿಗಳನ್ನು ಕಟ್ಟಿಸಿದನು.

5ಮಂದಿರದ ಸುತ್ತಲೂ ದೈವೋಕ್ತಿಯ ಸುತ್ತಲೂ ಗೋಡೆಗಳಿಗೆ ಸವಿಾಪವಾಗಿ ಕೊಠಡಿಗಳನ್ನು ಕಟ್ಟಿಸಿದನು.

6ಕೆಳಗಿರುವ ಕೊಠಡಿಯು ಐದು ಮೊಳ ಅಗಲ, ಎರಡನೇಯದು ಆರು ಮೊಳ ಅಗಲ, ಮೂರನೇಯದು ಏಳು ಮೊಳ ಅಗಲ. ತೊಲೆಗಳು ಮನೆಯ ಗೋಡೆಗಳಲ್ಲಿ ತಗಲದ ಹಾಗೆ ಮನೆಯ ಸುತ್ತಲೂ ಹೊರಗಡೆಯಲ್ಲಿ ನಿಲ್ಲುವ ಅಂತಸ್ತುಗಳನ್ನು ಕಟ್ಟಿಸಿದನು.

7ಮನೆಯನ್ನು ಕಟ್ಟುತ್ತಿರುವಾಗ ಅದು ಸಿದ್ಧವಾಗಿ ತರಲ್ಪಟ್ಟ ಕಲ್ಲುಗಳಿಂದ ಕಟ್ಟಲ್ಪಟ್ಟಿತು. ಆದದರಿಂದ ಮನೆಯನ್ನು ಕಟ್ಟುತ್ತಿರುವಾಗ ಅದರಲ್ಲಿ ಸುತ್ತಿಗೆ, ಕೊಡಲಿ, ಕಬ್ಬಿಣದ ಯಾವ ಸಾಮಾನಿನ ಶಬ್ದ ಕೇಳಲ್ಪಟ್ಟಿದ್ದಿಲ್ಲ.

೧ ಅರಸುಗಳು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी