ಆಕೆಗೆ ಮರಿಯಳೆಂಬ ಒಬ್ಬ ಸಹೋದರಿ ಇದ್ದಳು. ಆಕೆಯು ಯೇಸುವಿನ ಪಾದಗಳ ಬಳಿಯಲ್ಲಿ ಕೂತು ಆತನ ವಾಕ್ಯವನ್ನು ಕೇಳುತ್ತಿದ್ದಳು.
37ಅವನು-- ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ಅಂದನು. ಆಗ ಯೇಸು ಅವನಿಗೆ--ಹೋಗು, ನೀನೂ ಅದರಂತೆಯೇ ಮಾಡು ಎಂದು ಹೇಳಿದನು.
38ಇದಾದ ಮೇಲೆ ಅವರು ಹೋಗುತ್ತಿದ್ದಾಗ ಆತನು ಒಂದಾನೊಂದು ಹಳ್ಳಿಯನ್ನು ಪ್ರವೇಶಿಸಿದನು; ಆಗ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯೊಳಗೆ ಅಂಗೀಕರಿಸಿಕೊಂಡಳು.
39ಆಕೆಗೆ ಮರಿಯಳೆಂಬ ಒಬ್ಬ ಸಹೋದರಿ ಇದ್ದಳು. ಆಕೆಯು ಯೇಸುವಿನ ಪಾದಗಳ ಬಳಿಯಲ್ಲಿ ಕೂತು ಆತನ ವಾಕ್ಯವನ್ನು ಕೇಳುತ್ತಿದ್ದಳು.
40ಆದರೆ ಮಾರ್ಥಳು ಬಹಳ ಕೆಲಸದ ನಿಮಿತ್ತವಾಗಿ ಬೇಸರಗೊಂಡು ಆತನ ಬಳಿಗೆ ಬಂದು--ಕರ್ತನೇ, ಕೆಲಸ ಮಾಡುವದಕ್ಕೆ ನನ್ನ ಸಹೋದರಿಯು ನನ್ನೊಬ್ಬಳನ್ನೇ ಬಿಟ್ಟಿರುವದು ನಿನಗೆ ಚಿಂತೆಯಿಲ್ಲವೋ? ಆದದರಿಂದ ನನಗೆ ಸಹಾಯಮಾಡುವದಕ್ಕಾಗಿ ಅವಳಿಗೆ ಹೇಳು ಅಂದಳು.
41ಆದರೆ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀ;
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ