ಯೆಶಾಯ 48:8

ಹೌದು, ನೀನು ಕೇಳಿಲ್ಲ, ತಿಳಿದೂ ಇಲ್ಲ; ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ಯಾಕಂದರೆ ನೀನು ದೊಡ್ಡ ವಂಚಕನು ಎಂದೂ ಗರ್ಭದಿಂದಲೇ ನೀನು ದ್ರೋಹಿಯೆಂದೂ ನಾನು ತಿಳಿದುಕೊಂಡಿದ್ದೇನೆ.

ಸಂದರ್ಭದೊಂದಿಗೆ ಓದಿ · ಯೆಶಾಯ 48

6ನೀನು ಕೇಳಿದ್ದೀ; ಇವೆಲ್ಲ ವುಗಳನ್ನು ದೃಷ್ಟಿಸು; ನೀವು ಅದನ್ನು ತಿಳಿಸದೇ ಇದ್ದಿರೋ? ಇಂದಿನಿಂದ ಹೊಸ ಸಂಗತಿಗಳನ್ನು ನೀನು ತಿಳಿಯದಿದ್ದ ಗುಪ್ತವಾದ ವಿಷಯಗಳನ್ನು ನಿನಗೆ ಅರು ಹುತ್ತೇನೆ.

7ಆರಂಭದಲ್ಲಿ ಆಗದಿದ್ದವುಗಳು ಈಗ ಉಂಟಾಗಿವೆ; ಇಗೋ, ಅವು ನನಗೆ ತಿಳಿದಿದ್ದವೆಂದು ನೀನು ಹೇಳದಂತೆ ಈ ದಿನಕ್ಕೆ ಮುಂಚೆಯೇ ಅವು ಗಳನ್ನು ಕುರಿತು ನಿನಗೆ ಕೇಳಗೊಡಿಸಲಿಲ್ಲ.

8ಹೌದು, ನೀನು ಕೇಳಿಲ್ಲ, ತಿಳಿದೂ ಇಲ್ಲ; ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ಯಾಕಂದರೆ ನೀನು ದೊಡ್ಡ ವಂಚಕನು ಎಂದೂ ಗರ್ಭದಿಂದಲೇ ನೀನು ದ್ರೋಹಿಯೆಂದೂ ನಾನು ತಿಳಿದುಕೊಂಡಿದ್ದೇನೆ.

9ನನ್ನ ಹೆಸರು ಕೆಡದಂತೆ ನನ್ನ ಕೋಪವನ್ನು ತಡೆ ಮಾಡಿದೆ. ನನ್ನ ಸ್ತುತಿಗೆ ಕಳಂಕಬಾರದಂತೆ ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು.

10ಇಗೋ, ನಾನು ನಿನ್ನನ್ನು ಶೋಧಿಸಿದ್ದೇನೆ; ಆದರೆ ಬೆಳ್ಳಿಯಂತೆ ಅಲ್ಲ; ಸಂಕಟದ ಕುಲುಮೆಯಿಂದ ನಿನ್ನನ್ನು ಆದು ಕೊಂಡಿದ್ದೇನೆ.

ಯೆಶಾಯ 48 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी