ಪ್ರಸಂಗಿ 2:11

ಆಗ ನನ್ನ ಕೈಗಳು ನಡಿಸಿದವುಗಳೆಲ್ಲವನ್ನು ನಾನು ಪ್ರಯಾಸ ಪಟ್ಟ ಪ್ರಯಾಸವನ್ನು ದೃಷ್ಟಿಸಿದೆನು; ಇಗೋ, ಎಲ್ಲವೂ ವ್ಯರ್ಥ ಮತ್ತು ಮನಸ್ಸಿಗೆ ಆಯಾಸಕರ. ಸೂರ್ಯನ ಕೆಳಗೆ ಯಾವ ಲಾಭವಿಲ್ಲ.

ಸಂದರ್ಭದೊಂದಿಗೆ ಓದಿ · ಪ್ರಸಂಗಿ 2

9ಹೀಗೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದ ಎಲ್ಲರಿಗಿಂತಲೂ ನಾನು ಅಭಿವೃದ್ಧಿ ಹೊಂದಿ ದೊಡ್ಡವನಾಗಿದ್ದೆನು.

10ನನ್ನ ಕಣ್ಣುಗಳು ಬಯಸಿದ್ದೆಲ್ಲವನ್ನು ಅವುಗಳಿಂದ ಹಿಂತೆಗೆಯಲಿಲ್ಲ, ಯಾವ ಸಂತೋಷಕ್ಕಾಗಿಯೂ ನನ್ನ ಹೃದಯವನ್ನು ನಾನು ತಡೆಯಲಿಲ್ಲ; ನನ್ನ ಎಲ್ಲಾ ಪ್ರಯಾಸದಲ್ಲಿ ನನ್ನ ಹೃದಯವು ಸಂತೋಷಿಸಿತು; ನನ್ನ ಪ್ರಯಾಸ ದಿಂದೆಲ್ಲಾ ನನಗಾದ ಪಾಲು ಇದೆ.

11ಆಗ ನನ್ನ ಕೈಗಳು ನಡಿಸಿದವುಗಳೆಲ್ಲವನ್ನು ನಾನು ಪ್ರಯಾಸ ಪಟ್ಟ ಪ್ರಯಾಸವನ್ನು ದೃಷ್ಟಿಸಿದೆನು; ಇಗೋ, ಎಲ್ಲವೂ ವ್ಯರ್ಥ ಮತ್ತು ಮನಸ್ಸಿಗೆ ಆಯಾಸಕರ. ಸೂರ್ಯನ ಕೆಳಗೆ ಯಾವ ಲಾಭವಿಲ್ಲ.

12ಜ್ಞಾನವನ್ನೂ ಹುಚ್ಚುತನವನ್ನೂ ಮೂಢತೆಯನ್ನೂ ನೋಡುವದಕ್ಕೆ ನಾನು ತಿರುಗಿಕೊಂಡೆನು; ಅರಸನ ತರುವಾಯ ಬರುವ ಮನುಷ್ಯನು ಏನು ಮಾಡಾನು? ಮೊದಲಿದ್ದದ್ದು ಆಗಲೇ ನಡೆಯಿತು.

13ಆಗ ಕತ್ತಲೆಗಿಂತ ಬೆಳಕು ಶ್ರೇಷ್ಠವಾಗಿರುವಂತೆ ಮೂಢತನಕ್ಕಿಂತ ಜ್ಞಾನವು ಶ್ರೇಷ್ಠವಾಗಿದೆ ಎಂದು ನಾನು ಕಂಡೆನು.

ಪ್ರಸಂಗಿ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी