೨ ಕೊರಿಂಥದವರಿಗೆ 1:9

ಆದರೆ ಮರಣವಾಗು ತ್ತದೆಂಬ ನಿರ್ಣಯವು ನಮ್ಮೊಳಗೆ ಉಂಟಾಯಿತು; ನಾವು ನಮ್ಮ ಮೇಲೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವ ರಾಗಬೇಕೆಂದು ಹೀಗಾಯಿತು.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 1

7ನೀವು ಬಾಧೆಗಳಲ್ಲಿ ಪಾಲುಗಾರರಾಗಿರುವ ಪ್ರಕಾರ ಆದರಣೆ ಯಲ್ಲಿಯೂ ಪಾಲುಗಾರರಾಗಿದ್ದೀರೆಂದು ನಮಗೆ ತಿಳಿದಿರುವದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.

8ಸಹೋದರರೇ, ಆಸ್ಯದಲ್ಲಿ ನಮ್ಮಗುಂಟಾದ ಉಪದ್ರವವನ್ನು ನೀವು ತಿಳಿಯ ಬೇಕೆಂದು ನಾನು ಅಪೇಕ್ಷಿಸುತ್ತೇನೆ; ಹೇಗಂದರೆ ನಾವು ಜೀವದ ನಿರೀಕ್ಷೆಯಿಲ್ಲದವರಾಗುವಷ್ಟೂ ಅಳತೆಗೆಟ್ಟು ಬಲ ವಿಾರಿ ಕುಗ್ಗಿ ಹೋದೆವು.

9ಆದರೆ ಮರಣವಾಗು ತ್ತದೆಂಬ ನಿರ್ಣಯವು ನಮ್ಮೊಳಗೆ ಉಂಟಾಯಿತು; ನಾವು ನಮ್ಮ ಮೇಲೆ ಭರವಸವಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವ ರಾಗಬೇಕೆಂದು ಹೀಗಾಯಿತು.

10ಆತನು ನಮ್ಮನ್ನು ಎಂಥಾ ಭಯಂಕರವಾದ ಮರಣದಿಂದ ತಪ್ಪಿಸಿದ್ದಾನೆ, ಮತ್ತು ತಪ್ಪಿಸುತ್ತಾನೆ, ಇನ್ನು ಮುಂದೆಯೂ ಆತನು ನಮ್ಮನ್ನು ತಪ್ಪಿಸುವನೆಂದು ನಾವು ಆತನಲ್ಲಿ ಭರವಸೆಯುಳ್ಳವರಾಗಿದ್ದೇವೆ.

11ಅನೇಕರ ಮೂಲಕ ನಮಗೆ ಅನುಗ್ರಹಿಸಲ್ಪಟ್ಟಂಥ ದಾನದ ನಿಮಿತ್ತವಾಗಿ ಬಹಳ ಜನರಿಂದ ನಮ್ಮ ಪರವಾಗಿ ಉಪಕಾರ ಸ್ತುತಿಯಾಗುವಂತೆ ನೀವು ಸಹ ಒಟ್ಟಾಗಿ ನಮಗೋಸ್ಕರ ಪ್ರಾರ್ಥನೆಯ ಸಹಾಯಮಾಡುತ್ತಿದ್ದೀರಿ.

೨ ಕೊರಿಂಥದವರಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी