ಯೆಹೆಜ್ಕೇಲನು 23:24

ಅವರೆಲ್ಲರೂ ರಥಗಳ ಸಂಗಡಲೂ ಬಂಡಿ ಗಳ ಸಂಗಡಲೂ ಜನಗಳ ಸಮೂಹದ ಸಂಗಡಲೂ ಬಲವುಳ್ಳವರಾಗಿ ನಿನಗೆ ವಿರುದ್ಧವಾಗಿ ಬರುವರು. ಸುತ್ತಲೂ ಖೇಡ್ಯವನ್ನೂ ಗುರಾಣಿಯನ್ನೂ ಶಿರಸ್ತ್ರಾಣ ವನ್ನೂ ನಿನಗೆ ವಿರುದ್ಧವಾಗಿರಿಸುವೆನು. ಇದಲ್ಲದೆ ನಾನು ಅವರ ಮುಂದೆ ನ್ಯಾಯವನ್ನು ಇಡುವೆನು; ಅವರು ತಮ್ಮ ನ್ಯಾಯಗಳ ಪ್ರಕಾರ ನಿನಗೆ ನ್ಯಾಯತೀರಿಸುವರು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 23

22ಆದದರಿಂದ ಒಹೊಲೀಬಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಯಾರಿಂದ ನಿನ್ನ ಮನಸ್ಸು ಅಗಲಿಹೋಯಿತೋ ಆ ನಿನ್ನ ಪ್ರಿಯನನ್ನು ನಾನು ನಿನಗೆ ವಿರೋಧವಾಗಿ ಎಬ್ಬಿಸುತ್ತೇನೆ, ನಾನು ಅವರನ್ನು ಪ್ರತಿಯೊಂದು ಕಡೆಗೂ ವಿರೋಧವಾಗಿ ತರುತ್ತೇನೆ.

23ಬಾಬೆಲಿನವರು, ಎಲ್ಲಾ ಕಸ್ದೀಯರು, ಪೆಕೋದಿನವರು, ಷೋಯದವರು ಕೋಯದವರು, ಮತ್ತು ಎಲ್ಲಾ ಅಶ್ಶೂರ್ಯರ ಜೊತೆಗೆ ಅವರೆಲ್ಲಾ ಅಪೇಕ್ಷಿಸುವಂತಹ ಯೌವನಸ್ಥರೂ ಸೈನ್ಯಾಧಿಪತಿಗಳೂ ಅಧಿಕಾರಸ್ಥರೂ ಯುದ್ಧಶಾಲಿಗಳೂ ಖ್ಯಾತಿಹೊಂದಿ ದವರೂ ಎಲ್ಲರೂ ಕುದುರೆಗಳ ಮೇಲೆ ಸವಾರಿಮಾಡಿ ದವರೇ.

24ಅವರೆಲ್ಲರೂ ರಥಗಳ ಸಂಗಡಲೂ ಬಂಡಿ ಗಳ ಸಂಗಡಲೂ ಜನಗಳ ಸಮೂಹದ ಸಂಗಡಲೂ ಬಲವುಳ್ಳವರಾಗಿ ನಿನಗೆ ವಿರುದ್ಧವಾಗಿ ಬರುವರು. ಸುತ್ತಲೂ ಖೇಡ್ಯವನ್ನೂ ಗುರಾಣಿಯನ್ನೂ ಶಿರಸ್ತ್ರಾಣ ವನ್ನೂ ನಿನಗೆ ವಿರುದ್ಧವಾಗಿರಿಸುವೆನು. ಇದಲ್ಲದೆ ನಾನು ಅವರ ಮುಂದೆ ನ್ಯಾಯವನ್ನು ಇಡುವೆನು; ಅವರು ತಮ್ಮ ನ್ಯಾಯಗಳ ಪ್ರಕಾರ ನಿನಗೆ ನ್ಯಾಯತೀರಿಸುವರು.

25ಇದಲ್ಲದೆ ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು; ಅವರು ನಿನ್ನಲ್ಲಿ ಕೋಪತೀರಿಸಿ ಕೊಳ್ಳುವರು; ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದು ಹಾಕುವರು; ನಿನ್ನಲ್ಲಿ ಉಳಿದವರು ಕತ್ತಿಯಿಂದ ಬೀಳು ವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು.

26ಇದಲ್ಲದೆ ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸೌಂದರ್ಯದ ಒಡವೆಗಳನ್ನು ಕಸಿದುಕೊಳ್ಳುವರು;

ಯೆಹೆಜ್ಕೇಲನು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी