ಯೆಹೆಜ್ಕೇಲನು 46:21

ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅಂಗಳದ ನಾಲ್ಕು ಮೂಲೆ ಗಳನ್ನು ಹಾದುಹೋಗುವಂತೆ ಮಾಡಿದನು; ಇಗೋ, ಅಂಗಳದ ಒಂದೊಂದು ಮೂಲೆಯಲ್ಲಿ ಒಂದು ಅಂಗಳ ಇತ್ತು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 46

19ಆಮೇಲೆ ಅವನು ನನ್ನನ್ನು ಬಾಗಲಿನ ಪಕ್ಕದಲ್ಲಿ ಪ್ರವೇಶವಿದ್ದ ಉತ್ತರಕ್ಕೆ ಅಭಿಮುಖವಾದ ಯಾಜಕರ ಪರಿಶುದ್ಧ ಕೊಠಡಿಗೆ ಕರೆದುಕೊಂಡು ಹೋದನು. ಅಲ್ಲಿ ಇಗೋ, ಎರಡು ಕಡೆಗಳಲ್ಲಿ ಪಶ್ಚಿಮದ ಕಡೆಗೆ ಒಂದು ಸ್ಥಳವಿತ್ತು.

20ಆಗ ಅವನು ನನಗೆ--ಯಾಜಕರು ಅಪರಾಧ ಬಲಿಯನ್ನೂ ಪಾಪ ಬಲಿಯನ್ನೂ ಬೇಯಿಸಿದ ಆಹಾರದ ಅರ್ಪಣೆಯನ್ನು ಸುಡುವಂತೆ ಏರ್ಪಡಿ ಸಿರುವ ಸ್ಥಳವು ಇದೇ. ಜನರನ್ನು ಪರಿಶುದ್ಧ ಮಾಡು ವದಕ್ಕೆ ಅವರು ಅವುಗಳನ್ನು ಹೊರಗಿನ ಅಂಗಳಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಹೇಳಿದನು.

21ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅಂಗಳದ ನಾಲ್ಕು ಮೂಲೆ ಗಳನ್ನು ಹಾದುಹೋಗುವಂತೆ ಮಾಡಿದನು; ಇಗೋ, ಅಂಗಳದ ಒಂದೊಂದು ಮೂಲೆಯಲ್ಲಿ ಒಂದು ಅಂಗಳ ಇತ್ತು.

22ಅಂಗಳದ ನಾಲ್ಕು ಮೂಲೆಯಲ್ಲಿ ನಲವತ್ತು ಮೊಳ ಉದ್ದವಾಗಿಯೂ ಮೂವತ್ತು ಮೊಳ ಅಗಲ ವಾಗಿಯೂ ಕೂಡಿಕೊಂಡಿದ್ದವು. ಆ ನಾಲ್ಕೂ ಮೂಲೆಗಳಿಗೂ ಒಂದೇ ಅಳತೆಯಾಗಿತ್ತು.

23ಅವು ಗಳಲ್ಲಿ ಅಂದರೆ ಆ ನಾಲ್ಕರಲ್ಲಿ ಸುತ್ತಲೂ ಸಾಲು ಇತ್ತು. ಆ ಸಾಲುಗಳ ಕೆಳಗೆ ಸುತ್ತಲೂ ಬೇಯಿಸುವ ಸ್ಥಳಗಳು ಮಾಡಲ್ಪಟ್ಟಿದ್ದವು.

ಯೆಹೆಜ್ಕೇಲನು 46 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी