ಯೆಹೆಜ್ಕೇಲನು 34:28

ಅವರು ಇನ್ನು ಮೇಲೆ ಅನ್ಯಜನಾಂಗಗಳಿಗೆ ಕೊಳ್ಳೆಯಾಗು ವದಿಲ್ಲ; ಭೂಮಿಯ ಮೃಗಗಳು ಅವರನ್ನು ತಿನ್ನುವದಿಲ್ಲ; ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯ ವಾಗಿ ವಾಸಿಸುವರು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 34

26ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿ ಸುವೆನು, ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯಾಗುವದು;

27ಬಯಲಿನ ಮರವು ಅದರ ಫಲವನ್ನು ಕೊಡುವದು, ಭೂಮಿಯು ಅದರ ಆದಾಯವನ್ನು ಕೊಡುವದು, ಅವರು ತಮ್ಮ ದೇಶದಲ್ಲಿ ನಿರ್ಭಯವಾಗಿರುವರು; ನಾನೇ ಅದರ ನೊಗದ ಬಂಧನಗಳನ್ನು ಬಿಡಿಸಿ ಅವರಿಂದ ಸೇವೆ ಮಾಡಿಸಿಕೊಂಡವರ ಕೈಯಿಂದ ಅವರನ್ನು ತಪ್ಪಿಸಿದಾಗ ನಾನೇ ಕರ್ತನೆಂದು ಅವರು ತಿಳಿಯುವರು;

28ಅವರು ಇನ್ನು ಮೇಲೆ ಅನ್ಯಜನಾಂಗಗಳಿಗೆ ಕೊಳ್ಳೆಯಾಗು ವದಿಲ್ಲ; ಭೂಮಿಯ ಮೃಗಗಳು ಅವರನ್ನು ತಿನ್ನುವದಿಲ್ಲ; ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯ ವಾಗಿ ವಾಸಿಸುವರು.

29ನಾನು ಅವರಿಗಾಗಿ ಒಂದು ಪ್ರಸಿದ್ಧ ಫಲವೃಕ್ಷವನ್ನು ಬೆಳೆಯಿಸುವೆನು; ಇನ್ನು ಮೇಲೆ ಅವರು ದೇಶದಲ್ಲಿ ಹಸಿವೆಯಿಂದ ನಾಶವಾ ಗುವದಿಲ್ಲ; ಅವರು ಅನ್ಯಜನರ ತಿರಸ್ಕಾರಕ್ಕೆ ಇನ್ನು ಮೇಲೆ ಗುರಿಯಾಗುವದೇ ಇಲ್ಲ.

30ಆಗ ಅವರು ತಮ್ಮ ಕರ್ತನಾದ ದೇವರೆಂಬ ನಾನೇ ಅವರ ಸಂಗಡ ಇರುವೆನೆಂದೂ ಇಸ್ರಾಯೇಲಿನ ಮನೆತನದವರಾದ ಅವರೇ ನನ್ನ ಜನರಾಗಿರುವರೆಂದೂ ತಿಳಿಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.

ಯೆಹೆಜ್ಕೇಲನು 34 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी