ಯೆಶಾಯ 5:25

ಆದಕಾರಣ ಕರ್ತನ ಕೋಪವು ಜನರಿಗೆ ವಿರೋ ಧವಾಗಿ ಉರಿಗೊಂಡು ಅವರ ಮೇಲೆ ತನ್ನ ಕೈಚಾಚಿ ಅವರನ್ನು ಹೊಡೆದಿದ್ದಾನೆ; ಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿ ರುವವು. ಇಷ್ಟೆಲ್ಲಾ ಆದರೂ ಆತನ ಕೋಪವು ಹಿಂತಿರುಗದೆ ಇನ್ನೂ ಕೈಚಾಚಿಯೇ ಇದೆ.

ಸಂದರ್ಭದೊಂದಿಗೆ ಓದಿ · ಯೆಶಾಯ 5

23ಲಂಚಕ್ಕೋಸ್ಕರ ದುಷ್ಟನನ್ನು ನೀತಿವಂತನೆಂದು ನಿರ್ಣಯಿಸಿ ಮತ್ತು ನೀತಿಯನ್ನು ನೀತಿವಂತನಿಂದ ತೆಗೆದುಹಾಕುವವರಿಗೂ ಅಯ್ಯೋ!

24ಅವರು ಸೈನ್ಯಗಳ ಕರ್ತನ ನ್ಯಾಯ ಪ್ರಮಾಣವನ್ನು ನಿರಾಕರಿಸಿದ್ದರಿಂದಲೂ ಇಸ್ರಾಯೇ ಲಿನ ಪರಿಶುದ್ಧನ ವಾಕ್ಯವನ್ನು ಅಸಡ್ಡೆಮಾಡಿದ್ದ ರಿಂದಲೂ ಬೆಂಕಿಯು ಕೊಳ್ಳಿಯನ್ನು ನುಂಗಿಬಿಡುವ ಹಾಗೂ ಜ್ವಾಲೆಯು ಹೊಟ್ಟನ್ನು ಸುಟ್ಟುಬಿಡುವಂತೆಯೂ ಅದರ ಬೇರು ಕೊಳೆಯುವಂತೆಯೂ ಚಿಗುರು ಅವರ ಧೂಳಿನಂತೆಯೂ ತೂರಿಹೋಗುವವು.

25ಆದಕಾರಣ ಕರ್ತನ ಕೋಪವು ಜನರಿಗೆ ವಿರೋ ಧವಾಗಿ ಉರಿಗೊಂಡು ಅವರ ಮೇಲೆ ತನ್ನ ಕೈಚಾಚಿ ಅವರನ್ನು ಹೊಡೆದಿದ್ದಾನೆ; ಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿ ರುವವು. ಇಷ್ಟೆಲ್ಲಾ ಆದರೂ ಆತನ ಕೋಪವು ಹಿಂತಿರುಗದೆ ಇನ್ನೂ ಕೈಚಾಚಿಯೇ ಇದೆ.

26ಆತನು ದೂರದ ಜನಾಂಗದವರಿಗೆ ಗುರುತಿಗಾಗಿ ಧ್ವಜವನ್ನೆತ್ತಿ, ಭೂಮಿಯ ಅಂಚಿನಿಂದ ಅವರಿಗೆ ಸಿಳ್ಳುಹಾಕುವನು. ಇಗೋ, ಅವರು ತ್ವರೆಯಾಗಿ ಫಕ್ಕನೆ ಬರುವರು;

27ಅವರಲ್ಲಿ ಯಾರೂ ದಣಿದು ಮುಗ್ಗರಿಸರು; ಅಥವಾ ಅವರು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ, ಇಲ್ಲವೆ ಅವರ ನಡುಕಟ್ಟು ಬಿಚ್ಚಿಕೊಳ್ಳುವದಿಲ್ಲ. ಕೆರದ ಬಾರು ಹರಿಯುವದಿಲ್ಲ.

ಯೆಶಾಯ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी