ನೆಹೆಮಿಯ 1:8

ದಯಮಾಡಿ ನಿನ್ನ ಸೇವಕನಾದ ಮೋಶೆಗೆ ಹೇಳಿದ ಮಾತನ್ನು ಜ್ಞಾಪಕಮಾಡು, ಏನಂದರೆ--ನೀವು ಅಕೃತ್ಯ ಮಾಡಿದರೆ ನಾನು ನಿಮ್ಮನ್ನು ಜನಾಂಗಗಳನ್ನು ಚದರಿಸುವಂತೆ ಚದರಿಸುವೆನು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 1

6ನಿನ್ನ ಸೇವಕರಾದ ಇಸ್ರಾಯೇಲ್‌ ಮಕ್ಕಳಿ ಗೋಸ್ಕರ ಈಗ ಹಗಲಿರುಳು ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸಿದ ಪ್ರಾರ್ಥನೆಯನ್ನೂ ನಿನಗೆ ವಿರೋಧವಾಗಿ ನಾವು ಮಾಡಿದ ಇಸ್ರಾಯೇಲ್‌ ಮಕ್ಕಳ ಪಾಪಗಳ ಅರಿಕೆಮಾಡುವದನ್ನೂ ನೀನು ಕೇಳುವ ಹಾಗೆ ನಿನ್ನ ಕಿವಿ ಅಲೈಸುತ್ತಾ ಇರಲಿ, ನಿನ್ನ ಕಣ್ಣುಗಳು ತೆರೆದಿರಲಿ.

7ನಾನೂ ನನ್ನ ತಂದೆಯ ಮನೆಯವರೂ ಪಾಪಮಾಡಿದ್ದೇವೆ. ನಿನಗೆ ವಿರೋಧವಾಗಿ ಬಹು ಕೆಟ್ಟತನ ಮಾಡಿದ್ದೇವೆ; ನೀನು ನಿನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಾವು ಕೈಕೊಳ್ಳಲಿಲ್ಲ.

8ದಯಮಾಡಿ ನಿನ್ನ ಸೇವಕನಾದ ಮೋಶೆಗೆ ಹೇಳಿದ ಮಾತನ್ನು ಜ್ಞಾಪಕಮಾಡು, ಏನಂದರೆ--ನೀವು ಅಕೃತ್ಯ ಮಾಡಿದರೆ ನಾನು ನಿಮ್ಮನ್ನು ಜನಾಂಗಗಳನ್ನು ಚದರಿಸುವಂತೆ ಚದರಿಸುವೆನು.

9ಆದರೆ ನೀವು ನನ್ನ ಬಳಿಗೆ ತಿರುಗಿ ನನ್ನ ಆಜ್ಞೆಗಳನ್ನು ಕೈಕೊಂಡು ಅವುಗಳ ಪ್ರಕಾರ ಮಾಡಿದರೆ ನಿಮ್ಮಲ್ಲಿರುವವರು ಆಕಾಶದ ಅಂತ್ಯದ ವರೆಗೂ ಹೊರಡಿಸಲ್ಪಟ್ಟಿದ್ದರೂ ನಾನು ಅಲ್ಲಿಂದ ಅವ ರನ್ನು ಕೂಡಿಸಿ ನನ್ನ ಹೆಸರನ್ನಿಡಲು ಆದುಕೊಂಡ ಸ್ಥಳಕ್ಕೆ ಅವರನ್ನು ಬರಮಾಡುವೆನು ಎಂದು ಹೇಳಿದಿ.

10ನಿನ್ನ ಮಹಾ ಶಕ್ತಿಯಿಂದಲೂ ಬಲವಾದ ಕೈಯಿಂದಲೂ ನೀನು ವಿಮೋಚಿಸಿದ ನಿನ್ನ ಸೇವಕರೂ ಜನರೂ ಇವರೇ.

ನೆಹೆಮಿಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी