ಆದಿಕಾಂಡ 28:4

ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 28

2ಎದ್ದು ನಿನ್ನ ತಾಯಿಯ ತಂದೆಯಾದ ಬೆತೂವೇಲನು ಇರುವ ಪದ್ದನ್‌ ಅರಾಮಿಗೆ ಹೋಗಿ ನಿನ್ನ ತಾಯಿಯ ಸಹೋದರನಾದ ಲಾಬಾನನ ಮಕ್ಕಳಲ್ಲಿ ನಿನಗೆ ಹೆಂಡತಿಯನ್ನು ತಕ್ಕೋ.

3ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನೀನು ಜನಸಮುದಾಯವಾಗುವಂತೆ ನಿನ್ನನ್ನು ಅಭಿವೃದ್ಧಿ ಮಾಡಿ ಹೆಚ್ಚಿಸಲಿ,

4ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ ಅಂದನು.

5ಇಸಾಕನು ಯಾಕೋಬನನ್ನು ಕಳುಹಿಸಿದಾಗ ಅವನು ಪದ್ದನ್‌ ಅರಾಮಿನಲ್ಲಿದ್ದ ಯಾಕೋಬನ ಮತ್ತು ಏಸಾವನ ತಾಯಿಯಾದ ರೆಬೆಕ್ಕಳ ಸಹೋದರನಾದ ಅರಾಮಿನವನಾದ ಬೆತೊ ವೇಲನ ಮಗನಾಗಿದ್ದ ಲಾಬಾನನ ಬಳಿಗೆ ಹೋದನು.

6ಇಸಾಕನು ಯಾಕೋಬನನ್ನು ಆಶೀರ್ವದಿಸಿ ಅವನಿಗೆ ಹೆಂಡತಿಯನ್ನು ತಕ್ಕೊಳ್ಳುವದಕ್ಕೆ ಪದ್ದನ್‌ ಅರಾಮಿಗೆ ಕಳುಹಿಸಿದ್ದನ್ನೂ ಇಸಾಕನು ಅವನನ್ನು ಆಶೀರ್ವದಿಸುತ್ತಿದ್ದಾಗ ಅವನಿಗೆ--ನೀನು ಕಾನಾನ್ಯರ ಕುಮಾರ್ತೆಯರಲ್ಲಿ ಹೆಂಡತಿಯನ್ನು ತಕ್ಕೊಳ್ಳಬಾರದು ಎಂದು ಆಜ್ಞಾಪಿಸಿದ್ದನ್ನೂ

ಆದಿಕಾಂಡ 28 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी