ಆಗ ಆ ಮುದುಕನು ನಿನಗೆ ಸಮಾಧಾನವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ; ಹೇಗಾ ದರೂ ಬೀದಿಯೊಳಗೆ ಇಳುಕೊಳ್ಳಬೇಡವೆಂದು ಹೇಳಿ
18ಅವನು ಇವನಿಗೆ--ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯಾಮ್ ಬೆಟ್ಟದ ಪಾರ್ಶ್ವಕ್ಕೆ ಹಾದು ಹೋಗು ತ್ತೇವೆ. ನಾನು ಅಲ್ಲಿಯವನು; ಈಗ ಕರ್ತನ ಮನೆಗೆ ಹೋಗುತ್ತೇನೆ; ಆದರೆ ನನ್ನನ್ನು ಯಾರೂ ಮನೆಗೆ ಸೇರಿಸಿಕೊಳ್ಳಲಿಲ್ಲ.
19ಆದರೂ ನಮ್ಮ ಕತ್ತೆಗಳಿಗೆ ಮೇವೂ ನನಗೂ ನಿನ್ನ ದಾಸಿಗೂ ನಿನ್ನ ಸೇವಕರ ಸಂಗಡ ಇರುವ ಯೌವನಸ್ಥನಿಗೂ ರೊಟ್ಟಿ ಮತ್ತು ದ್ರಾಕ್ಷಾರಸವು ಉಂಟು; ಏನೂ ಕೊರತೆ ಇಲ್ಲ ಅಂದನು.
20ಆಗ ಆ ಮುದುಕನು ನಿನಗೆ ಸಮಾಧಾನವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ; ಹೇಗಾ ದರೂ ಬೀದಿಯೊಳಗೆ ಇಳುಕೊಳ್ಳಬೇಡವೆಂದು ಹೇಳಿ
21ಅವನನ್ನು ತನ್ನ ಮನೆಗೆ ಕರಕೊಂಡು ಹೋಗಿ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕಾಲು ಗಳನ್ನು ತೊಳೆದು ತಿಂದು ಕುಡಿದರು.
22ಅವರು ತಮ್ಮ ಹೃದಯವನ್ನು ಸಂತೋಷ ಪಡಿಸಿ ಕೊಳ್ಳುತ್ತಿರುವ ವೇಳೆಯಲ್ಲಿ ಇಗೋ, ಆ ಪಟ್ಟಣದ ಮನುಷ್ಯರಲ್ಲಿ ಬೆಲಿಯಾಳನ ಕೆಲವು ಕುಮಾರರು ಆ ಮನೆಯನ್ನು ಸುತ್ತಿಕೊಂಡು ಕದವನ್ನು ಬಡಿದು ಆ ಮನೆಯ ಯಜಮಾನನಾದ ಮುದುಕನಿಗೆ--ನಿನ್ನ ಮನೆಯಲ್ಲಿ ಬಂದ ಆ ಮನುಷ್ಯನನ್ನು ನಾವು ತಿಳು ಕೊಳ್ಳುವ ಹಾಗೆ, ಅವನನ್ನು ಹೊರಗೆ ತಾ ಎಂದು ಹೇಳಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ