ವಿಮೋಚನಕಾಂಡ 14:16

ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು. ಆಗ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 14

14ಕರ್ತನು ನಿಮ ಗೋಸ್ಕರ ಯುದ್ಧಮಾಡುವನು; ಆದರೆ ನೀವು ಸಮಾಧಾನವಾಗಿರ್ರಿ ಅಂದನು.

15ಆಗ ಕರ್ತನು ಮೋಶೆಗೆ--ನೀನು ನನಗೆ ಯಾಕೆ ಮೊರೆಯಿಡುತ್ತೀ? ಇಸ್ರಾಯೇಲ್‌ ಮಕ್ಕಳು ಮುಂದಕ್ಕೆ ಹೋಗಬೇಕೆಂದು ಹೇಳು.

16ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಕೈಚಾಚಿ ಅದನ್ನು ವಿಭಾಗಿಸು. ಆಗ ಇಸ್ರಾಯೇಲ್‌ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣಗಿದ ನೆಲದ ಮೇಲೆ ಹೋಗುವರು.

17ಇಗೋ, ನಾನು ಐಗುಪ್ತ್ಯರ ಹೃದಯವನ್ನು ಕಠಿಣಮಾಡುತ್ತೇನೆ; ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು.

18ನಾನು ಫರೋ ಹನ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿ ಕೊಂಡಾಗ ನಾನೇ ಕರ್ತನೆಂದು ಐಗುಪ್ತ್ಯರು ತಿಳಿದು ಕೊಳ್ಳುವರು ಅಂದನು.

ವಿಮೋಚನಕಾಂಡ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी