ಆದಿಕಾಂಡ 14:11

ಆಗ ಅವರು ಸೊದೋಮ್‌ ಗೊಮೋರಗಳ ಎಲ್ಲಾ ಸಂಪತ್ತನ್ನೂ ಅವರ ಎಲ್ಲಾ ಆಹಾರ ಪದಾರ್ಥ ವನ್ನೂ ತೆಗೆದುಕೊಂಡು ಹೋದರು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 14

9ಏಲಾಮಿನ ಅರಸನಾದ ಕೆದೊರ್ಲಗೋಮರನಿಗೂ ಜನಾಂಗಗಳ ಅರಸನಾದ ತಿದ್ಗಾಲನಿಗೂ ಶಿನಾರಿನ ಅರಸನಾದ ಅಮ್ರಾಫೆಲನಿಗೂ ಎಲ್ಲಸಾರಿನ ಅರಸನಾದ ಅರಿಯೋಕನಿಗೂ ವಿರೋಧವಾಗಿ ಸಿದ್ದೀಮ್‌ ತಗ್ಗಿನಲ್ಲಿ ಯುದ್ಧಮಾಡಿದರು. ಐದು ಮಂದಿ ಅರಸರು ನಾಲ್ವರು ಅರಸರಿಗೆ ವಿರೋಧವಾಗಿದ್ದರು.

10ಸಿದ್ದೀಮ್‌ ತಗ್ಗು ಜೇಡಿನ ಕುಣಿಗಳಿಂದ ತುಂಬಿತ್ತು. ಸೊದೋಮ್‌ ಗೊಮೋರಗಳ ಅರಸರು ಓಡಿಹೋಗುವಾಗ ಅಲ್ಲಿ ಬಿದ್ದರು. ಉಳಿದವರು ಬೆಟ್ಟಕ್ಕೆ ಓಡಿಹೋದರು.

11ಆಗ ಅವರು ಸೊದೋಮ್‌ ಗೊಮೋರಗಳ ಎಲ್ಲಾ ಸಂಪತ್ತನ್ನೂ ಅವರ ಎಲ್ಲಾ ಆಹಾರ ಪದಾರ್ಥ ವನ್ನೂ ತೆಗೆದುಕೊಂಡು ಹೋದರು.

12ಸೊದೋ ಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗನಾದ ಲೋಟನನ್ನೂ ಅವನ ಸಂಪತ್ತನ್ನೂ ತೆಗೆದುಕೊಂಡು ಹೋದರು.

13ತಪ್ಪಿಸಿಕೊಂಡವನೊಬ್ಬನು ಹೋಗಿ ಇಬ್ರಿಯ ನಾದ ಅಬ್ರಾಮನಿಗೆ ಇದನ್ನು ತಿಳಿಸಿದನು. ಇವನು ಎಷ್ಕೋಲನಿಗೂ ಆನೇರನಿಗೂ ಸಹೋದರನಾಗಿದ್ದು ಅಮೋರಿಯನಾದ ಮಮ್ರೆಯ ಮೈದಾನದಲ್ಲಿ ವಾಸ ವಾಗಿದ್ದನು. ಇವರು ಅಬ್ರಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು.

ಆದಿಕಾಂಡ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी