ಅಪೊಸ್ತಲರ ಕೃತ್ಯಗಳು 23:22

ಹೀಗೆ ಮುಖ್ಯ ನಾಯಕನು ಆ ಯೌವನಸ್ಥನನ್ನು ಕಳುಹಿಸಿಕೊಡು ವಾಗ--ನೀನು ಈ ವಿಷಯಗಳನ್ನು ನನಗೆ ವ್ಯಕ್ತಪಡಿ ಸಿದ್ದೀ ಎಂದು ಯಾರಿಗೂ ಹೇಳಬೇಡ ಎಂದು ಅವನಿಗೆ ಆಜ್ಞಾಪಿಸಿದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 23

20ಅದಕ್ಕೆ ಅವನು--ಪೌಲನ ವಿಷಯದಲ್ಲಿ ಯೆಹೂದ್ಯರು ಇನ್ನೂ ಸಂಪೂ ರ್ಣವಾಗಿ ವಿಚಾರಣೆ ಮಾಡುವವರೋ ಎಂಬಂತೆ ಅವನನ್ನು ನಾಳೆ ಆಲೋಚನಾಸಭೆಗೆ ತರುವದಕ್ಕಾಗಿ ಅವರು ನಿನ್ನನ್ನು ಬೇಡಿಕೊಳ್ಳುವದಕ್ಕೆ ಅಪೇಕ್ಷೆಪಟ್ಟು ಒಪ್ಪಂದ ಮಾಡಿಕೊಂಡಿದ್ದಾರೆ.

21ಆದರೆ ನೀನು ಅವರಿಗೆ ಒಪ್ಪಬೇಡ; ಅವನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಶಪಥ ವನ್ನು ಮಾಡಿಕೊಂಡವರಲ್ಲಿ ನಾಲ್ವತ್ತು ಮಂದಿಗಿಂತ ಹೆಚ್ಚಾದವರು ಅವನಿಗಾಗಿ ಕಾಯುತ್ತಿದ್ದಾರೆ; ಈಗ ಅವರು ನಿನ್ನ ಮಾತಿಗಾಗಿ ಎದುರು ನೋಡುತ್ತಾ ಸಿದ್ಧವಾಗಿದ್ದಾರೆ ಎಂದು ಹೇಳಿದ

22ಹೀಗೆ ಮುಖ್ಯ ನಾಯಕನು ಆ ಯೌವನಸ್ಥನನ್ನು ಕಳುಹಿಸಿಕೊಡು ವಾಗ--ನೀನು ಈ ವಿಷಯಗಳನ್ನು ನನಗೆ ವ್ಯಕ್ತಪಡಿ ಸಿದ್ದೀ ಎಂದು ಯಾರಿಗೂ ಹೇಳಬೇಡ ಎಂದು ಅವನಿಗೆ ಆಜ್ಞಾಪಿಸಿದನು.

23ಆಗ ಅವನು ಇಬ್ಬರು ಶತಾಧಿಪತಿ ಗಳನ್ನು ತನ್ನ ಬಳಿಗೆ ಕರೆದು--ರಾತ್ರಿ ಮೂರು ಘಂಟೆಗೆ ಕೈಸರೈಯಕ್ಕೆ ಹೋಗುವದಕ್ಕಾಗಿ ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಮಾಡಿ,

24ಕುದುರೆಗಳನ್ನು ತಂದು ಪೌಲನನ್ನು ಹತ್ತಿಸಿ ಅಧಿಪತಿ ಯಾದ ಫೇಲಿಕ್ಸನ ಬಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕೆಂದು ಹೇಳಿದನು.

ಅಪೊಸ್ತಲರ ಕೃತ್ಯಗಳು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी