ಅಪೊಸ್ತಲರ ಕೃತ್ಯಗಳು 8:24

ಅದಕ್ಕೆ ಸೀಮೋನನು--ನೀವು ಹೇಳಿರುವ ವಿಷಯ ಗಳಲ್ಲಿ ಯಾವದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ನೀವೇ ಕರ್ತನನ್ನು ಬೇಡಿಕೊಳ್ಳಿರಿ ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 8

22ಆದದರಿಂದ ಈ ನಿನ್ನ ಕೆಟ್ಟತನದ ವಿಷಯವಾಗಿ ಮಾನಸಾಂತರಪಟ್ಟು ದೇವರನ್ನು ಬೇಡಿಕೋ, ಆಗ ನಿನ್ನ ಹೃದಯದ ಆಲೋಚನೆಯು ಕ್ಷಮಿಸಲ್ಪಡಬಹುದು.

23ಯಾಕಂದರೆ ನೀನು ಹಾನಿಕರ ವಾದ ವಿಷದಲ್ಲಿಯೂ ದುಷ್ಟತ್ವದ ಬಂಧನದಲ್ಲಿಯೂ ಇರುತ್ತೀಯೆಂದು ನನಗೆ ಕಾಣುತ್ತದೆ ಅಂದನು.

24ಅದಕ್ಕೆ ಸೀಮೋನನು--ನೀವು ಹೇಳಿರುವ ವಿಷಯ ಗಳಲ್ಲಿ ಯಾವದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ನೀವೇ ಕರ್ತನನ್ನು ಬೇಡಿಕೊಳ್ಳಿರಿ ಎಂದು ಹೇಳಿದನು.

25ಹೀಗಿರಲಾಗಿ ಅವರು ಸಾಕ್ಷಿ ಕೊಡುತ್ತಾ ಕರ್ತನ ವಾಕ್ಯವನ್ನು ಸಾರುತ್ತಾ ಯೆರೂಸ ಲೇಮಿಗೆ ಹಿಂತಿರುಗಿ ಹೊರಟು ಸಮಾರ್ಯದವರ ಅನೇಕ ಗ್ರಾಮಗಳಲ್ಲಿ ಸುವಾರ್ತೆಯನ್ನು ಸಾರಿದರು.

26ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ--ನೀನು ಎದ್ದು ದಕ್ಷಿಣ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ ಎಂದು ಹೇಳಿದನು.

ಅಪೊಸ್ತಲರ ಕೃತ್ಯಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी