ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ
1ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು.
2ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.
3ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ
4ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು
5ನಿನ್ನ ಯೌವನವು ಹದ್ದಿನಂತೆ ಹೊಸದಾಗುವ ಹಾಗೆ ನಿನ್ನ ಬಾಯಿಯನ್ನು ಒಳ್ಳೇದ ರಿಂದ ತೃಪ್ತಿಪಡಿಸುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ