ಆಗ ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರವಿಾಯನ ಕುತ್ತಿಗೆ ಯಿಂದ ನೊಗವನ್ನು ತೆಗೆದು ಅದನ್ನು ಮುರಿದುಬಿಟ್ಟನು.
8ಮುಂಚೆ ಇದ್ದ ಹಿಂದಿನ ಪ್ರವಾದಿಗಳು ಅನೇಕ ದೇಶಗಳಿಗೂ ದೊಡ್ಡ ರಾಜ್ಯ ಗಳಿಗೂ ವಿರೋಧವಾಗಿ ಯುದ್ಧವನ್ನೂ ಕೇಡನ್ನೂ ಜಾಡ್ಯವನ್ನೂ ಕುರಿತು ಪ್ರವಾದಿಸಿದರು.
9ಸಮಾಧಾನ ವನ್ನು ಕುರಿತು ಪ್ರವಾದಿಸುವ ಪ್ರವಾದಿಯಾದರೆ ಆ ಪ್ರವಾದಿಯ ವಾಕ್ಯವು ಉಂಟಾಗುವಾಗ ಅವನು ದೇವ ರಿಂದ ನಿಜವಾಗಿ ಕಳುಹಿಸಲ್ಪಟ್ಟ ಪ್ರವಾದಿ ಎಂದು ತಿಳಿಯತಕ್ಕದ್ದು ಅಂದನು.
10ಆಗ ಪ್ರವಾದಿಯಾದ ಹನನ್ಯನು ಪ್ರವಾದಿಯಾದ ಯೆರವಿಾಯನ ಕುತ್ತಿಗೆ ಯಿಂದ ನೊಗವನ್ನು ತೆಗೆದು ಅದನ್ನು ಮುರಿದುಬಿಟ್ಟನು.
11ಹನನ್ಯನು ಜನರೆಲ್ಲರ ಮುಂದೆ ಹೇಳಿದ್ದೇನಂದರೆ --ಕರ್ತನು ಹೀಗೆ ಹೇಳುತ್ತಾನೆ--ಇದೇ ಪ್ರಕಾರ ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ನೊಗವನ್ನು ಎರಡು ವರುಷದೊಳಗಾಗಿ ಎಲ್ಲಾ ಜನಾಂಗಗಳ ಕುತ್ತಿ ಗೆಯ ಮೇಲಿನಿಂದ ಮುರಿದು ಹಾಕುವೆನು ಅಂದನು. ಆಗ ಪ್ರವಾದಿಯಾದ ಯೆರೆವಿಾಯನು ತನ್ನ ಮಾರ್ಗ ವಾಗಿ ಹೋದನು.
12ಆಗ ಪ್ರವಾದಿಯಾದ ಹನನ್ಯನು ಆ ನೊಗವನ್ನು ಪ್ರವಾದಿಯಾದ ಯೆರೆವಿಾಯನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕಿದ ಮೇಲೆ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ