ಯಾಜಕಕಾಂಡ 16:15

ತರುವಾಯ ಅವನು ಜನರಿಗೋಸ್ಕರ ಪಾಪಬಲಿ ಯಾಗಿರುವ ಆಡನ್ನು ವಧಿಸಿ ಅದರ ರಕ್ತವನ್ನು ತೆರೆಯ ಒಳಗಡೆ ತಂದು ಹೋರಿಯ ರಕ್ತದಿಂದ ಮಾಡಿ ದಂತೆಯೇ ಕೃಪಾಸನದ ಮೇಲೆಯೂ ಮುಂದೆಯೂ ಚಿಮುಕಿಸಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 16

13ಅವನು ಸಾಯದ ಹಾಗೆ ಆ ಧೂಪದ ಹೊಗೆಯು ಸಾಕ್ಷಿಯ ಮೇಲಿರುವ ಕೃಪಾಸನವು ಮುಚ್ಚಿಕೊಳ್ಳುವಂತೆ ಆ ಧೂಪವನ್ನು ಕರ್ತನ ಎದುರಿನಲ್ಲಿ ಉರಿಯುವ ಕೆಂಡಗಳ ಮೇಲೆ ಹಾಕಬೇಕು.

14ಆ ಹೋರಿಯ ರಕ್ತದಿಂದ ತೆಗೆದು ಕೊಂಡು ಕೃಪಾಸನದ ಮೇಲೆ ಪೂರ್ವಕ್ಕೆ ತನ್ನ ಬೆರಳಿನಿಂದ ಚಿಮುಕಿಸಬೇಕು; ಕೃಪಾಸನದ ಮುಂದೆ ಆ ರಕ್ತವನ್ನು ತನ್ನ ಬೆರಳಿನಿಂದ ಏಳು ಸಾರಿ ಚಿಮುಕಿಸಬೆಕು.

15ತರುವಾಯ ಅವನು ಜನರಿಗೋಸ್ಕರ ಪಾಪಬಲಿ ಯಾಗಿರುವ ಆಡನ್ನು ವಧಿಸಿ ಅದರ ರಕ್ತವನ್ನು ತೆರೆಯ ಒಳಗಡೆ ತಂದು ಹೋರಿಯ ರಕ್ತದಿಂದ ಮಾಡಿ ದಂತೆಯೇ ಕೃಪಾಸನದ ಮೇಲೆಯೂ ಮುಂದೆಯೂ ಚಿಮುಕಿಸಬೇಕು.

16ಇಸ್ರಾಯೇಲಿನ ಮಕ್ಕಳ ಅಶುದ್ಧ ತ್ವದ ನಿಮಿತ್ತವಾಗಿಯೂ ಅವರ ಪಾಪಗಳಲ್ಲಿರುವ ಎಲ್ಲಾ ಅಪರಾಧಗಳಿಗಾಗಿಯೂ ಅವನು ಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತಮಾಡಬೇಕು. ಅವರ ಅಶುದ್ಧ ತ್ವದ ಮಧ್ಯದಲ್ಲಿ ಉಳಿದವರಿಗೋಸ್ಕರ ಸಭೆಯಗುಡಾರಕ್ಕೂ ಅದರಂತೆಯೇ ಮಾಡಬೇಕು.

17ಅವನು ಪ್ರಾಯಶ್ಚಿತ್ತಮಾಡುವದಕ್ಕಾಗಿ ಪರಿಶುದ್ಧ ಸ್ಥಳಕ್ಕೆ ಹೋಗಿರುವಾಗ ತನಗೋಸ್ಕರವೂ ತನ್ನ ಮನೆಯ ವರೆಲ್ಲರಿಗೋಸ್ಕರವೂ ಇಸ್ರಾಯೇಲ್ಯರ ಸಭೆ ಯವರೆಲ್ಲರಿಗೋಸ್ಕರವೂ ಪ್ರಾಯಶ್ಚಿತ್ತಮಾಡಿ ಹೊರಗೆ ಬರುವ ತನಕ ಸಭೆಯ ಗುಡಾರದಲ್ಲಿ ಒಬ್ಬ ಮನುಷ್ಯನಾದರೂ ಇರಬಾರದು.

ಯಾಜಕಕಾಂಡ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी