ರೋಮಾಪುರದವರಿಗೆ 8:11

ಯೇಸುವನ್ನು ಸತ್ತವ ರೊಳಗಿಂದ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿ ದ್ದರೆ ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದಾತನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮರ್ತ್ಯ ದೇಹಗಳನ್ನು ಸಹ ಬದುಕಿಸುವನು.

ಸಂದರ್ಭದೊಂದಿಗೆ ಓದಿ · ರೋಮಾಪುರದವರಿಗೆ 8

9ನೀವಾ ದರೋ ನಿಮ್ಮಲ್ಲಿ ದೇವರಾತ್ಮನು ವಾಸವಾಗಿರುವದಾದರೆ ಶರೀರಾಧೀನರಲ್ಲ, ಆತ್ಮನಿಗೆ ಅಧೀನರಾಗಿದ್ದೀರಿ. ಯಾವ ನಿಗಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ ಅವನು ಕ್ರಿಸ್ತನವ ನಲ್ಲ.

10ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ದೇಹವು ಪಾಪದ ದೆಸೆಯಿಂದ ಸತ್ತದ್ದಾಗಿದ್ದರೂ ಆತ್ಮವು ನೀತಿಯ ದೆಸೆ ಯಿಂದ ಜೀವವುಳ್ಳದ್ದಾಗಿದೆ.

11ಯೇಸುವನ್ನು ಸತ್ತವ ರೊಳಗಿಂದ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿ ದ್ದರೆ ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದಾತನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮರ್ತ್ಯ ದೇಹಗಳನ್ನು ಸಹ ಬದುಕಿಸುವನು.

12ಹೀಗಿರಲಾಗಿ ಸಹೋದರರೇ, ಶರೀರಕ್ಕನುಸಾರ ವಾಗಿ ಜೀವಿಸುವದಕ್ಕೆ ನಾವು ಶರೀರಕ್ಕೆ ಋಣಸ್ಥರಲ್ಲ.

13ನೀವು ಶರೀರಭಾವವನ್ನು ಅನುಸರಿಸಿದರೆ ಸಾಯುವಿರಿ; ಆದರೆ ನೀವು ಆತ್ಮನಿಂದ ದೇಹದ ಕ್ರಿಯೆಗಳನ್ನು ಸಾಯಿಸುವದಾದರೆ ಜೀವಿಸುವಿರಿ.

ರೋಮಾಪುರದವರಿಗೆ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी