ಅರಸ ನಾದ ಹಿಜ್ಕೀಯನ ಕಡೆಯಿಂದ ತನ್ನ ಬಳಿಗೆ ಬಂದ ಸೇವಕರಿಗೆ ಯೆಶಾಯನು--
3ಆಗ ಅವರು ಅವನಿಗೆ--ಈ ದಿವಸವು ಕಷ್ಟಕರವಾಗಿಯೂ ಗದರಿಕೆಯಾಗಿಯೂ ದೂಷಣೆಯಾಗಿಯೂ ಇದೆ. ಪ್ರಸವವೇದನೆಯ ಕಾಲವು ಬಂದದೆ, ಆದರೆ ಹೆರುವದಕ್ಕೆ ಬಲ ಸಾಲದು.
4ನಿನ್ನ ದೇವರಾಗಿರುವ ಕರ್ತನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ಮಾತುಗಳನ್ನು ಕೇಳಿರುವನು; ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂ ಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿ ತೀರಿಸಾನು; ಆದದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಆತನನ್ನು ಪ್ರಾರ್ಥಿಸು ಎಂಬದಾಗಿ ಹಿಜ್ಕೀಯನು ಅನ್ನುತ್ತಾನೆ ಎಂದು ಹೇಳಿದರು.
5ಅರಸ ನಾದ ಹಿಜ್ಕೀಯನ ಕಡೆಯಿಂದ ತನ್ನ ಬಳಿಗೆ ಬಂದ ಸೇವಕರಿಗೆ ಯೆಶಾಯನು--
6ಅಶ್ಶೂರದ ಅರಸನ ಸೇವಕರು ನನ್ನನ್ನು ದೂಷಿಸಿದ ಮಾತುಗಳನ್ನು ನೀನು ಕೇಳಿದ್ದೀ; ಆದರೆ ನೀನು ಅವುಗಳಿಗೆ ಹೆದರಬೇಡ.
7ಇಗೋ, ನಾನು ಅವನ ಮೇಲೆ ಒಂದು ವಿಪತ್ತನ್ನು ಕಳುಹಿಸುವೆನು. ಅವನು ಒಂದು ಸುದ್ದಿಯನ್ನು ಕೇಳಿ ತಿರುಗಿಕೊಂಡು ಸ್ವದೇಶಕ್ಕೆ ಹೋಗಿ ಅಲ್ಲಿ ಕತ್ತಿಯಿಂದ ಬೀಳುವಂತೆ ಮಾಡುವೆನು ಎಂಬ ಈ ಮಾತುಗಳನ್ನು ನಿಮ್ಮ ಯಜಮಾನರಿಗೆ ತಿಳಿಸಿರಿ ಎಂದು ಹೇಳಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ