೨ ಕೊರಿಂಥದವರಿಗೆ 7:13

ಆದಕಾರಣ ನಿಮ್ಮ ಸಂತೈಸುವಿಕೆಯಿಂದ ನಮಗೆ ಆದರಣೆ ಉಂಟಾಯಿತು. ಹೌದು, ನಿಮ್ಮೆಲ್ಲರಿಂದ ತೀತನ ಮನಸ್ಸಿಗೆ ಉಪಶಮನವಾದ ಕಾರಣ ನಾವು ಅವನ ಸಂತೋಷಕ್ಕಾಗಿ ಹೆಚ್ಚಾಗಿ ಸಂತೋಷಪಟ್ಟೆವು.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 7

11ಯಾಕಂದರೆ ದೇವರ ಚಿತ್ತಾನುಸಾರವಾದ ಈ ದುಃಖವು ನಿಮ್ಮಲ್ಲಿ ಎಂಥ ಎಚ್ಚರಿಕೆಯನ್ನೂ ಎಂಥ ನಿರ್ದೋಷತ್ವವನ್ನೂ ಎಂಥ ರೋಷವನ್ನೂ ಎಂಥ ಭಯವನ್ನೂ ಎಂಥ ಅಧಿಕವಾದ ಹಂಬಲವನ್ನೂ ಎಂಥ ಆಸಕ್ತಿಯನ್ನೂ ಎಂಥ ಪ್ರತಿಕಾರವನ್ನೂ ಹುಟ್ಟಿಸಿತೆಂದು ನೋಡಿರಿ. ಇದರಲ್ಲಿ ನೀವೆಲ್ಲಾ ನಿರ್ದೋಷಿಗಳೆಂದು ತೋರಿಸಿಕೊಂ

12ನಾನು ಹೀಗೆ ನಿಮಗೆ ಬರೆದದ್ದು ಅನ್ಯಾಯ ಮಾಡಿದವನಿ ಗೋಸ್ಕರವಲ್ಲ, ಅನ್ಯಾಯ ಸಹಿಸಿದವನಿಗೋಸ್ಕರವೂ ಅಲ್ಲ; ದೇವರ ದೃಷ್ಟಿಯಲ್ಲಿ ನಿಮಗೋಸ್ಕರ ನಮಗಿರುವ ಚಿಂತೆಯು ನಿಮಗೆ ತೋರಿ ಬರುವದಕ್ಕೋಸ್ಕರವೇ ಬರೆದೆನು.

13ಆದಕಾರಣ ನಿಮ್ಮ ಸಂತೈಸುವಿಕೆಯಿಂದ ನಮಗೆ ಆದರಣೆ ಉಂಟಾಯಿತು. ಹೌದು, ನಿಮ್ಮೆಲ್ಲರಿಂದ ತೀತನ ಮನಸ್ಸಿಗೆ ಉಪಶಮನವಾದ ಕಾರಣ ನಾವು ಅವನ ಸಂತೋಷಕ್ಕಾಗಿ ಹೆಚ್ಚಾಗಿ ಸಂತೋಷಪಟ್ಟೆವು.

14ಯಾಕಂದರೆ ನಾನು ಅವನ ಮುಂದೆ ನಿಮ್ಮನ್ನು ಹೊಗಳಿದ್ದರಲ್ಲಿ ನಾಚಿಕೆಪಡಬೇಕಾಗಿ ಬರಲಿಲ್ಲ. ನಾವು ನಿಮಗೆ ಹೇಳಿದವುಗಳೆಲ್ಲಾ ಹೇಗೆ ಸತ್ಯವಾಗಿದ್ದವೋ ಹಾಗೆಯೇ ನಾವು ತೀತನ ಮುಂದೆ ಆಡಿದ ಹೊಗಳಿಕೆಯೂ ಸತ್ಯವೆಂದು ಕಂಡುಬಂತು.

15ನೀವು ಭಯದಿಂದ ನಡಗುವವರಾಗಿ ಅವನನ್ನು ಸೇರಿಸಿ ಕೊಂಡದ್ದರಲ್ಲಿ ನಿಮ್ಮೆಲ್ಲರ ವಿಧೇಯತೆಯನ್ನು ಅವನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನ ಮಮತೆಯು ಹೆಚ್ಚಾಗುವದು.

೨ ಕೊರಿಂಥದವರಿಗೆ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी