ಯೆಹೆಜ್ಕೇಲನು 21:3

ಇಸ್ರಾ ಯೇಲ್‌ ದೇಶಕ್ಕೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ನಿಮಗೆ ವಿರೋಧವಾಗಿದ್ದೇನೆ ಮತ್ತು ನನ್ನ ಕತ್ತಿಯನ್ನು ಅದರ ಒರೆಯಿಂದ ಹೊರಗೆ ತೆಗೆದು ನಿನ್ನೊಳಗಿರುವ ನೀತಿ ವಂತನನ್ನೂ ದುಷ್ಟನನ್ನೂ ಕಡಿದುಬಿಡುವೆನು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 21

1ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--

2ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖನಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾ ಯೇಲ್‌ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸು.

3ಇಸ್ರಾ ಯೇಲ್‌ ದೇಶಕ್ಕೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ನಿಮಗೆ ವಿರೋಧವಾಗಿದ್ದೇನೆ ಮತ್ತು ನನ್ನ ಕತ್ತಿಯನ್ನು ಅದರ ಒರೆಯಿಂದ ಹೊರಗೆ ತೆಗೆದು ನಿನ್ನೊಳಗಿರುವ ನೀತಿ ವಂತನನ್ನೂ ದುಷ್ಟನನ್ನೂ ಕಡಿದುಬಿಡುವೆನು.

4ನಾನು ನೀತಿವಂತನನ್ನೂ ದುಷ್ಟನನ್ನೂ ಕಡಿದು ಬಿಡುವದರಿಂದ ನನ್ನ ಕತ್ತಿಯು ದಕ್ಷಿಣದಿಂದ ಮೊದಲುಗೊಂಡು ಉತ್ತ ರದ ಮನುಷ್ಯರೆಲ್ಲರಿಗೆ ವಿರೋಧವಾಗಿ ಅದರ ಒರೆ ಯನ್ನು ಬಿಟ್ಟು ಹೋಗುವದು.

5ಆಗ ಕರ್ತನಾದ ನಾನೇ ನನ್ನ ಕತ್ತಿಯನ್ನು ಹೊರಗೆ ತೆಗೆದೆನೆಂದು ಮನುಷ್ಯ ರೆಲ್ಲರಿಗೂ ತಿಳಿಯುವದು; ಅದು ಮತ್ತೆ ತಿರುಗಿ ಬರು ವದೇ ಇಲ್ಲ.

ಯೆಹೆಜ್ಕೇಲನು 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी