ಆಕೆಯು ಲೊರು ಹಾಮಳನ್ನು ಮೊಲೆ ಬಿಡಿಸಿದ ಮೇಲೆ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.
6ಅವಳು ತಿರುಗಿ ಬಸುರಾಗಿ ಮಗಳನ್ನು ಹೆತ್ತಳು. ಆಗ ದೇವರು ಅವನಿಗೆ-- ಅವಳನ್ನು ಲೋರುಹಾಮ ಎಂಬ ಹೆಸರಿನಿಂದ ಕರೆ; ಯಾಕಂದರೆ ನಾನು ಇನ್ನು ಮೇಲೆ ಇಸ್ರಾಯೇಲಿನ ಮನೆತನ ದವರನ್ನು ಕರುಣಿಸುವದೇ ಇಲ್ಲ; ಆದರೆ ನಾನು ಅವರನ್ನು ಸಂಪೂರ್ಣವಾಗಿ ತೆಗೆದುಬಿಡುತ್ತೇನೆ.
7ನಾನು ಯೆಹೂದದ ಮನೆತನದವರನ್ನು ಕರುಣಿಸಿ ಅವರನ್ನು ಬಿಲ್ಲಿನಿಂದಲಾದರೂ ಕತ್ತಿಯಿಂದಲಾದರೂ ಯುದ್ಧದಿಂದಲಾದರೂ ಕುದುರೆಗಳಿಂದಲಾದರೂ ಇಲ್ಲವೆ ಕುದುರೆಯ ಸವಾರರಿಂದಲಾದರೂ ರಕ್ಷಿಸು ವದಿಲ್ಲ; ಆದರೆ ಅವರನ್ನು ಅವರ ದೇವರಾದ ಕರ್ತ ನಿಂದ ರಕ್ಷಿಸುವೆನು ಅಂದನು.
8ಆಕೆಯು ಲೊರು ಹಾಮಳನ್ನು ಮೊಲೆ ಬಿಡಿಸಿದ ಮೇಲೆ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.
9ಆಗ ದೇವರು--ಅವನ ಹೆಸರನ್ನು ಲೋ ಅಮ್ಮಿ ಎಂದು ಕರೆ, ಯಾಕಂದರೆ ನೀವು ನನ್ನ ಜನರಲ್ಲ, ನಾನು ನಿಮ್ಮ ದೇವರಾಗಿರುವದಿಲ್ಲ ಅಂದನು.
10ಆದಾಗ್ಯೂ ಇಸ್ರಾಯೇಲಿನ ಮಕ್ಕಳ ಸಂಖ್ಯೆ ಅಳೆಯಲೂ ಲೆಕ್ಕಿಸಲೂ ಆಗದ ಸಮುದ್ರದ ಮರಳಿನ ಹಾಗೆ ಇರುವದು; ಮುಂದೆ ಇದಾದ ಮೇಲೆ--ನನ್ನ ಜನರಲ್ಲವೆಂದು ಅವರಿಗೆ ಹೇಳಿದ ಸ್ಥಳದಲ್ಲಿಯೇ ಜೀವವುಳ್ಳ ದೇವರ ಕುಮಾರರೆಂದು ಅವರಿಗೆ ಹೇಳುವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ